Select Your Language

Notifications

webdunia
webdunia
webdunia
Wednesday, 23 April 2025
webdunia

10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ!?

ಮಂಗಳೂರು
ಮಂಗಳೂರು , ಬುಧವಾರ, 7 ಡಿಸೆಂಬರ್ 2022 (12:25 IST)
ಮಂಗಳೂರು : ನಗರದಲ್ಲಿ ಕುಡುಕನೊಬ್ಬನಿಗೆ ಕಂತೆ ಕಂತೆ ನೋಟು ಒಲಿದು ಬಂದಿದ್ದರೂ, ಅರ್ಧಗಂಟೆಯಲ್ಲಿ ಆ ಹಣದೊಂದಿಗೆ ಕುಡುಕ ಪೊಲೀಸ್ ಠಾಣೆ ಸೇರುವಂತಾಗಿದೆ.

ಕುಡಿತದ ಚಟವೇ ಆತನನ್ನು ಮೂರು ದಿನಗಳ ಕಾಲ ಠಾಣೆಯಲ್ಲೇ ಕೊಳೆಯುವಂತೆ ಮಾಡಿದೆ. ಹತ್ತು ಲಕ್ಷ ರೂಪಾಯಿಯ ಕಂತೆ ಕಂತೆ ನೋಟುಗಳ ಬಂಡಲ್ನ್ನು ಕುಡುಕ ಇದೀಗ ಕಳೆದುಕೊಂಡಿದ್ದಾನೆ.

ಮಂಗಳೂರಿನ ರಸ್ತೆ ಬದಿಯಲ್ಲಿ ಕುಡುಕನಿಗೆ ಸಿಕ್ಕಿದ 10 ಲಕ್ಷ ರೂಪಾಯಿ ಹತ್ತೇ ನಿಮಿಷದಲ್ಲಿ ಪೊಲೀಸರ ಪಾಲಾದ ಕಥೆ ಇದು. ಕಳೆದ ನ.27 ರಂದು ಮಂಗಳೂರಿನ ಪಂಪ್ವೆಲ್ ಬಳಿ ಶಿವರಾಜ್ ಎಂಬಾತ ಅಲ್ಲಿಯೇ ಸಮೀಪದ ವೈನ್ಶಾಪ್ನಲ್ಲಿ ಮದ್ಯ ಸೇವಿಸಿ ಹೊರಗಡೆ ನಿಂತಿದ್ದ.

ಆಗ ಹೊರಗಡೆ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಇದನ್ನು ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕ ನೋಡಿದ್ದರು. ತಕ್ಷಣ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500 ಹಾಗೂ 2,000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡು ಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ವಂಚನೆ : ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ