Select Your Language

Notifications

webdunia
webdunia
webdunia
webdunia

ತಾಯಿಯೊಂದಿಗೆ ಹುಲಿ ಮರಿ ಹೆಜ್ಜೆ

ತಾಯಿಯೊಂದಿಗೆ ಹುಲಿ ಮರಿ ಹೆಜ್ಜೆ
ಚಾಮರಾಜನಗರ , ಬುಧವಾರ, 7 ಡಿಸೆಂಬರ್ 2022 (19:54 IST)
ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿಹುಲಿಯು ಹೆಜ್ಜೆ ಹಾಕುತ್ತಿರುವ ದೃಶ್ಯ ಸೆರೆಯಾಗಿದೆ. ಹುಲಿಯೊಂದಿಗೆ ಅದರ ಮರಿ ಪುಟ್ಟ ಪುಟ್ಟ ಹೆಜ್ಜೆ ಹಾಕಿದ್ದು, ಪ್ರವಾಸಿಗರ ಮನಗೆದ್ದಿದೆ. ನಿನ್ನೆ ಸಫಾರಿಗೆ ತೆರಳಿದ್ದಾಗ ಈ ದೃಶ್ಯ ಸೆರೆಯಾಗಿದೆ. ಬಂಡಿಪುರ ವಲಯದ ಗಾರೆಪಾಲ ರಸ್ತೆಯಲ್ಲಿ ಸುಂದರಿ ಎಂಬ ಹುಲಿಯು ಮರಿಗೆ ಜನ್ಮ ಕೊಟ್ಟಿತ್ತು. ಈ ತಾಯಿ ಮರಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ. ಅಮ್ಮನ ಹೆಜ್ಜೆ ಹಿಂಬಾಲಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ನೆಟ್ಟಿಗರು ಅಮ್ಮ-ಮಗುವಿನ ಹೆಜ್ಜೆಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ. 8-10ರವರೆಗೆ ಭಾರೀ ಮಳೆ ಸಾಧ್ಯತೆ