Select Your Language

Notifications

webdunia
webdunia
webdunia
webdunia

ಜನವರಿ 3 ರಿಂದ ರಾಜ್ಯದ 15-18 ವರ್ಷದ ಮಕ್ಕಳಿಗೆ ಲಸಿಕೆ: ಸಚಿವ ಸುಧಾಕರ್​ ಘೋಷಣೆ

Vaccination
bangalore , ಮಂಗಳವಾರ, 28 ಡಿಸೆಂಬರ್ 2021 (20:09 IST)
ರಾಜ್ಯದಲ್ಲಿ 15 -18 ವರ್ಷದ ಮಕ್ಕಳಿಗೆ ಜನವರಿ 3 ರಿಂದ ಮೊದಲ ಹಂತದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಕನಿಷ್ಠ 15 ವರ್ಷ ಮೇಲ್ಪಟ್ಟ 43 ಲಕ್ಷ ಮಕ್ಕಳಿಗೆ ನಿಯಮನುಸಾರವಾಗಿ ಲಸಿಕೆ ನೀಡಲಾಗುವುದು. ಇನ್ನು 3ನೇ ಡೋಸ್ ಜನವರಿ 1 0ರಿಂದ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ 3ನೇ ಡೋಸ್ ನೀಡಲಾಗುತ್ತದೆ. ಪ್ರತಿ ಜಿಲ್ಲೆ, ಪ್ರತಿ ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್‌ಗೆ 3ನೇ ಡೋಸ್ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಮೊದಲ ಡೋಸ್ ಶೇ.97ರಷ್ಟು ಆಗಿದೆ. ಬಾಕಿ ಉಳಿದ ಶೇ.3ರಷ್ಟು ಮೊದಲ ಡೋಸ್ ಅನ್ನು ಶೀಘ್ರವೇ ಹಾಕಲಾಗುತ್ತದೆ. ಶೇಕಡಾ 75ರಷ್ಟು ಮಂದಿಗೆ ಕೋವಿಡ್ ವಿರುದ್ಧ ಎರಡನೇ ಡೋಸ್ ನೀಡಲಾಗಿದೆ ಎಂದರು.
, ಡಿಸಿಜಿಐ 12 ವರ್ಷ ಕ್ಕಿಂತ ಹೆಚ್ಚಿನ ಮಕ್ಕಳಿಗೆ ಭಾರತ್ ಬಯೋಟೆಕ್ʼನ ಕೊವ್ಯಾಕ್ಸಿನ್ʼಗೆ ತುರ್ತು ಬಳಕೆಯ ಅಧಿಕಾರ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದಿಂದ 'ನೈಟ್ ಕರ್ಪ್ಯೂ ಮಾರ್ಗಸೂಚಿ' ಪ್ರಕಟ: ಯಾವುದಕ್ಕೆ ಅನುಮತಿ.?