Select Your Language

Notifications

webdunia
webdunia
webdunia
webdunia

ಗಾಂಧಿ ಜಯಂತಿಯಂದು ಮತ್ತೊಂದು ಮೈಲಿಗಲ್ಲು

ಗಾಂಧಿ ಜಯಂತಿ
ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತವು ಒಟ್ಟು 90 ಕೋಟಿ ಲಸಿಕೆಗಳ ಮೈಲಿಗಲ್ಲಾದ ದಾಖಲೆಯನ್ನ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ತಿಳಿಸಿದ್ದಾರೆ.

ಈ ಸಾಧನೆಗೆ 'ಜೈ ಅನುಸಂಧನ್' ಎಂಬ ಘೋಷಣೆಯನ್ನ ಲಗತ್ತಿಸಿದ ಸಚಿವರು, ಅದನ್ನ ಪೂರೈಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಶ್ಲಾಘಿಸಿದ್ದಾರೆ.
'ಭಾರತವು 90 ಕೋಟಿ ಕೋವಿಡ್19 ಲಸಿಕೆಗಳ ಹೆಗ್ಗುರುತನ್ನ ದಾಟಿದೆ. ಶ್ರೀಶಾಸ್ತ್ರಿ ಜೀ ಅವರು 'ಜೈ ಜವಾನ್ - ಜೈ ಕಿಸಾನ್' ಎಂಬ ಘೋಷಣೆಯನ್ನು ನೀಡಿದರು. ಪೂಜ್ಯ ಅಟಲ್ ಜೀ ಅವ್ರು 'ಜೈ ವಿಜ್ಞಾನ' ಸೇರಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಜೀ ಅವರು 'ಜೈ ಅನುಸಂಧನ್' ಘೋಷಣೆಯನ್ನ ನೀಡಿದರು. ಈ ಸಂಶೋಧನೆಯ ಫಲಿತಾಂಶವೆಂದ್ರೆ ಈ ಕೊರೊನಾ ಲಸಿಕೆ' ಎಂದು ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, ಶುಭ ಸಂದರ್ಭದಲ್ಲಿ ಭಾರತ ಮೈಲಿಗಲ್ಲು ಸಾಧಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಪ್ರಧಾನಿ ನರೇಂದ್ರ ಮೋದಿ ಅವ್ರ ಜನ್ಮದಿನದಂದು ಭಾರತ ಒಂದೇ ದಿನದಲ್ಲಿ 2 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಿದೆ. ಇನ್ನು ಭಾರತವು ಶುಕ್ರವಾರ 2 ಕೋಟಿ ಕೋವಿಡ್-19 ಲಸಿಕೆ ಡೋಸ್ʼಗಳನ್ನ ನೀಡುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸುತ್ತಿದ್ದಂತೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಸಿಕೆಯ ಯಶಸ್ಸನ್ನು ದೇಶದ ವೈದ್ಯರು, ನವೋದ್ಯಮಿಗಳು, ಆಡಳಿತಗಾರರು, ದಾದಿಯರು, ಆರೋಗ್ಯ ರಕ್ಷಣೆ ಮತ್ತು ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಸಮರ್ಪಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

'ಖಾದಿ ಮತ್ತು ಗ್ರಾಮೋದ್ಯೋಗ' ಉತ್ತೇಜನಕ್ಕೆ ಸರ್ಕಾರದ ಆದ್ಯತೆ :ಬೊಮ್ಮಾಯಿ