Publish Date: Thu, 14 Nov 2024 (11:33 IST)
Updated Date: Thu, 14 Nov 2024 (11:38 IST)
ತುಮಕೂರು: ನನ್ನನ್ನು ಮುಟ್ಟಕ್ಕೆ ಬಂದರೆ ಬಿಜೆಪಿಯವರು ಜನರು ಸುಮ್ಮನೇ ಬಿಡಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ವಿ ಸೋಮಣ್ಣ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿಯವರಿಗೆ ಸಿದ್ದರಾಮಯ್ಯ ಬಡವರಿಗೆ ಕೊಡ್ತಿದ್ದಾರೆ ಎಂದು ಹೊಟ್ಟೆ ಉರಿ ಇದಕ್ಕೆ. ಅದಕ್ಕೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದೇನೆ, ನನ್ನ ಮುಟ್ಟಿದ್ರೆ ಕರ್ನಾಟಕದ ಜನ ನಿಮ್ಮನ್ನು ಸುಮ್ಮನೇ ಬಿಡಲ್ಲ ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು.
ಇದಕ್ಕೆ ಇಂದು ಕೇಂದ್ರ ಸಚಿವ ವಿ ಸೋಮಣ್ಣ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಅವರನ್ನು ಮುಟ್ಟಿದ್ರೆ ಪೊಲೀಸರು ಸುಮ್ಮನೇ ಬಿಡ್ತಾರಾ? ಒಬ್ಬ ಮುಖ್ಯಮಂತ್ರಿಯನ್ನು ಮುಟ್ಟಿದ್ರೆ ಪೊಲೀಸ್ನವರು ಕೇಸ್ ಹಾಕ್ತಾರೆ. ನಿಮ್ಮನ್ನು ಯಾರೂ ಮುಟ್ಟೋದು ಬೇಡ ಬಿಡಿ ಎಂದು ಸೋಮಣ್ಣ ಹೇಳಿದ್ದಾರೆ.
ಈ ರೀತಿ ಮುಖ್ಯಮಂತ್ರಿಗಳೇ ಧಮ್ಕಿ ಹಾಕಿದ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅವರು ಏನು ಮಾತನಾಡ್ತಾರೆ, ಅದರ ದುಷ್ಪರಿಣಾಮ ಏನು ಎಂಬುದನ್ನು ಅವರೇ ತೀರ್ಮಾನ ಮಾಡಬೇಕು. ಜನರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಸೋಮಣ್ಣ ವ್ಯಂಗ್ಯ ಮಾಡಿದ್ದಾರೆ.