Webdunia - Bharat's app for daily news and videos

Install App

ಪಿಎಸ್ಐ ಪರೀಕ್ಷೆಗೆಂದು ಸತ್ತವರ ಹೆಸರಿನ ಸಿಮ್ ಬಳಕೆ!

Webdunia
ಮಂಗಳವಾರ, 26 ಏಪ್ರಿಲ್ 2022 (12:54 IST)
ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿವೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿಗೆ ತನಿಖೆ ವೇಳೆ ಶಾಕಿಂಗ್ ಸತ್ಯಗಳು ಹೊರಬರುತ್ತಿವೆ.
 
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಗಳು ದಿನವೂ ಹೊರ ಬರುತ್ತಲೇ ಇವೆ. ಪರೀಕ್ಷೆಯಲ್ಲಿ ಅಕ್ರಮ ಮಾಡುತ್ತಿದ್ದ ಕಿಲಾಡಿಗಳು ಅದೆಷ್ಟು ಚಾಲಾಕಿಗಳು ಅಂದ್ರೆ ಅಕ್ರಮದಲ್ಲಿ ಸಿಕ್ಕು ಬೀಳಬಾರದು ಅಂತ ಸತ್ತವರ ಹೆಸರಿನ ಸಿಮ್ ಕಾರ್ಡ್ಗಳನ್ನು ಅಕ್ರಮಕ್ಕೆ ಬಳಸಿಕೊಳ್ಳುತ್ತಿದ್ದರು.

ಕಳೆದ ವರ್ಷ ಲಕ್ಷ್ಮೀ ಪುತ್ರ ಎನ್ನುವ ವ್ಯಕ್ತಿ ಕೋವಿಡ್ನಿಂದ ಮೃತಪ್ಟಿರುತ್ತಾನೆ. ಆತನ ಮೊಬೈಲ್ ಮತ್ತು ಸಿಮ್ ಕಾರ್ಡ್ ಪಡೆದಿದ್ದ ಈ ಪ್ರಕರಣದ ಕಿಂಗ್ಪಿನ್ ಆರ್.ಡಿ ಪಾಟೀಲ್, ಬ್ಲೂಟೂತ್ ಮೂಲಕ ಪರೀಕ್ಷಾ ಅಕ್ರಮ ನಡೆಸಲು ಸತ್ತ ಲಕ್ಷ್ಮೀಪುತ್ರನ ಸಿಮ್ ಕಾರ್ಡ್ ಬಳಸಿಕೊಳ್ಳುತ್ತಾನೆ. ಆ ಸಿಮ್ ಕಾರ್ಡ್ ಮೂಲಕವೇ ಅಕ್ರಮವಾಗಿ ಆನ್ಸರ್ ಹೇಳಲಾಗುತ್ತದೆ ಎನ್ನಲಾಗಿದೆ.

ಈ ವಿಚಾರ ಈ ಅಕ್ರಮದ ಬಗ್ಗೆ ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಬಯಲಿಗೆ ಬಂದಿದೆ. ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆಸಿದ ಆರೋಪದಲ್ಲಿರುವ ಕಿಂಗ್ಪಿನ್ ಆರ್ಡಿ ಪಾಟೀಲ್ ನ ಬಳಿ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದ ಲಕ್ಷ್ಮೀಪುತ್ರ ಎಂಬಾತ ಸೂಪರ್ವೈಸರ್ ಆಗಿ ಕೆಲಸ ಮಾಡ್ತಿದ್ದ.

ಈ ಲಕ್ಷ್ಮೀಪುತ್ರ ಕೋವಿಡ್ನಿಂದ ಕಳೆದ ಒಂದು ವರಗಷದ ಹಿಂದೆ ಮೃತಪಟ್ಟಿರುತ್ತಾನೆ. ಆತನ ಬಳಿಕ ಎರಡು ಮೊಬೈಲ್ಗಳ ಪೈಕಿ ಒಂದು ಮೊಬೈಲ್ ಇಟ್ಟುಕೊಂಡು ಅದನ್ನು ಪರೀಕ್ಷಾ ಅಕ್ರಮಕ್ಕೆ ಬಳಸಿಕೊಂಡಿದ್ದ ಈ ಖತರನಾಕ್ ಆಸಾಮಿ.

ತಮ್ಮ ಬಳಿಯಿರುವ ಮೊಬೈಲ್ ಬಳಸಿದ್ರೆ ಪ್ರಕರಣ ಬಯಲಿಗೆ ಬರುತ್ತೆ ಅಂತಾ ಬೇರೆಯವರ ಸಿಮ್ ಬಳಸುತ್ತಿದ್ದ ಈತ, ಇನ್ನೂ ಸತ್ತವರ ಮೊಬೈಲ್ ಸಿಕ್ರೆ ಸುಮ್ಮನೆ ಬಿಡ್ತಾನಾ? ಎಷ್ಟು ಸಾಧ್ಯವೋ ಅಷ್ಟು ಅಕ್ರಮ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾನೆ ಈ ಕಿಲಾಡಿ ಆರ್.ಡಿ ಪಾಟೀಲ್.  ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕದಲ್ಲಿ ಇಂದು ಹೇಗಿರಲಿದೆ ಹವಾಮಾನ

ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಗಿಫ್ಟ್ ಘೋಷಿಸಿದ ಮೋದಿ

ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ

ಜಮ್ಮು ಕಾಶ್ಮೀರ ಮೇಘಸ್ಫೋಟದಲ್ಲಿ 33ಮಂದಿ ಸಾವು: ಅತ್ಯಂತ ದುರಂತ ಸುದ್ದಿ, ದ್ರೌಪದಿ ಮುರ್ಮು

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ಮುಂದಿನ ಸುದ್ದಿ
Show comments