Select Your Language

Notifications

webdunia
webdunia
webdunia
webdunia

ಸೈಟ್‌ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

murder

geetha

bangalore , ಸೋಮವಾರ, 29 ಜನವರಿ 2024 (17:00 IST)
ಬೆಂಗಳೂರು-ಸೈಟ್‌ ವಿಚಾರಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಿಗೆಹಳ್ಳಿ ಬಳಿಯ ಎನ್.ಟಿ‌.ಐಲೇಔಟ್ ನಲ್ಲಿ ನಡೆದಿದೆ.ಪ್ರಕಾಶ್ ಎಂಬಾತನ ಮೇಲೆ ಹಲ್ಲೆ‌ ಮಾಡಿ ಕೊಲೆ ಮಾಡಲಾಗಿದೆ.ಇಂದು ಮಧ್ಯಾಹ್ನ 2 ಘಂಟೆಯ ಸುಮಾರಿಗೆ ಘಟನೆ ನಡಿದಿದೆ.
 
ಪ್ರಕಾಶ್ ಎಂಬುವವರಿಗೆ ಸೇರಿದ ಸೈಟ್ ಎನ್.ಟಿ.ಐ ಕಾಲೋನಿಯಲ್ಲಿದೆ.ಈ ಸೈಟ್ ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ಸಹ ಇದೆ.ಸಾಕಷ್ಟು ದಿನಗಳಿಂದ ನಾಗರಾಜ್ ಮತ್ತು ಪ್ರಕಾಶ್ ರವರ ಮಧ್ಯೆ ಈ ವಿಚಾರವಾಗಿ ಗಲಾಟೆಯಾಗುತ್ತಿತ್ತು.ಇಂದು ನಾಗರಾಜ್ ಮತ್ತು ಪ್ರಕಾಶ್ ನಡುವೆ ಇದೆ ವಿಚಾರಕ್ಕೆ ಗಲಾಟೆಯಾಗಿದೆ.ಇಂದು ನಾಗರಾಜ್ ಕುಟುಂಬದಸ್ಥರು ಹಲ್ಲೆ ಮಾಡಿ ಕೊಲೆ‌ ಮಾಡಿದ್ದಾರೆಂಬ ಆರೋಪ ಇದೆ.ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಿಣಿಗೆ ವಂಚನೆ ಮಾಡಿದ ಬುಡುಬುಡಿಕೆಗೆ ಶೋಧ-ಡಿಸಿಪಿ ಲಕ್ಷ್ಮಿ ಪ್ರಸಾದ್