Select Your Language

Notifications

webdunia
webdunia
webdunia
webdunia

ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯನನ್ನೇ ಸಹಚರರಿಂದ ಕೊಲೆ

murder

geetha

bangalore , ಭಾನುವಾರ, 28 ಜನವರಿ 2024 (20:41 IST)
ಬೆಂಗಳೂರು : ತಡರಾತ್ರಿಯ 1.30 ರವರೆಗೂ ಸತತವಾಗಿ ಕುಡಿದ ಗ್ಯಾಂಗ್‌ ನಡುವೆ ಜಗಳ ಶುರುವಾಗಿತ್ತು. ಈ ಜಗಳವನ್ನು ಬಿಡಿಸಲು ಹೋದ ದರ್ಶನ್‌ ಗೆ ನಿನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಹಾಕಿದ್ದಾರೆ. ಮೃತ ದರ್ಶನ್‌ ದೊಡ್ಡಮ್ಮ ಗೌರಮ್ಮ ಆತನಿಗೆ 3000 ರೂ. ಹಣ ನೀಡಿ ಮನೆಗೆ ರೇಷನ್‌ ತರುವಂತೆ ಹೇಳಿದ್ದರು.‌ ಆದರೆ ದರ್ಶನ್‌ ತನ್ನ ಗೆಳೆಯರ ಪಟಾಲಂ ಕಟ್ಟಿಕೊಂಡು ಬಾರ್‌ ಗೆ ಮದ್ಯಸೇವನೆಗೆ ತೆರಳಿದ್ದ. ಬಾರ್‌ ಬಳಿಯಿದ್ದ ದರ್ಶನ್‌ ನನ್ನು ಆತನ ತಾಯಿ ಮತ್ತು ತಂಗಿ ನೋಡಿದ್ದರು. 

ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯನನ್ನೇ ಸಹಚರರು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದರ್ಶನ್‌ ಮೃತ ದುರ್ದೈವಿಯಾಗಿದ್ದು, ಆರೋಪಿಗಳಾದ ಪ್ರೀತಮ್‌, ಯಶವಂತ್‌, ಲಂಕೇಶ್‌, ನಿತಿನ್‌ ಮತ್ತು ಪ್ರಶಾಂತ್ ರನ್ನು ಬಂಧಿಸಲಾಗಿದೆ.ಜ .24 ರಂದು ಈ ಘಟನೆ ನಡೆದಿದ್ದು,  ಮರುದಿನವೇ ಆರೋಪಿಗಳನ್ನು ಪೊಲೀಸರು  ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರದ ಧ್ವಂಸ ಮಾಡಿದ ಮೂವರ ಬಂಧನ