Webdunia - Bharat's app for daily news and videos

Install App

ಪರಿಷ್ಕೃತ ಪಠ್ಯ ವೆಬ್‍ಸೈಟ್‍ಗೆ ಅಪ್‍ಲೋಡ್

Webdunia
ಭಾನುವಾರ, 21 ಆಗಸ್ಟ್ 2022 (15:01 IST)
ಭಾರೀ ವಿವಾದಕ್ಕೆ ಕಾರಣವಾಯಿತು, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್ ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. 6,7,9 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7 ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು 4 ನೇ ತರಗತಿಯ ಪರಿಸರ ಅಧ್ಯಯನ ಒಂದು ಪಠ್ಯ ಪರಿಷ್ಕರಣೆ ಮಾಡಲಾಗಿದೆ. ನಮ್ಮ ಸಂವಿಧಾನ, ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ, ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ಮೈಸೂರು ಮತ್ತು ಇತರ ಸಂಸ್ಥಾನಗಳು, ಭಾರತದ ಮತ ಪ್ರವರ್ತಕರು, ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು, ಗೊಂಬೆ ಕಲಿಸುವ ನೀತಿ ಪಠ್ಯಗಳನ್ನು ಪರಿಷ್ಕರಣೆ ಮಾಡಲಾಗಿದೆ. ಶೀಘ್ರವೇ ಶಾಲೆಗಳಿಗೆ ಹೊಸ ಪರಿಷ್ಕರಣೆ ಪಠ್ಯ ರವಾನೆಯಾಗಲಿದೆ. ಹೊಸ ಪರಿಷ್ಕೃತ ಪಠ್ಯವನ್ನೇ ಬೋಧನೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments