Webdunia - Bharat's app for daily news and videos

Install App

ರೀಲ್ಸ್​​​ ಮಾಡಿ ರಮ್ಯ ರಂಜನೆ

Webdunia
ಭಾನುವಾರ, 21 ಆಗಸ್ಟ್ 2022 (14:55 IST)
ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಂಗಾತಿ ಕುರಿತಾದ ಹಾಡೊಂದನ್ನು ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಹಂಚಿಕೊಂಡಿದ್ದ ಮೋಹಕತಾರೆ ಇದೀಗ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಈ ಹಾಡು ಮುರಿದು ಬಿದ್ದ ಪ್ರೇಮಕಹಾನಿಗೆ ಹೇಳಿ ಮಾಡಿಸಿದ ಹಾಡು ಎಂಬುದು ವಿಶೇಷ. ಇದೀಗ ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ಹಾಡಿನ ರೀಲ್ಸ್​ನಲ್ಲಿ ರಮ್ಯಾ ಮತ್ತೆ ಕಾಣಿಸಿಕೊಂಡಿದ್ದಾರೆ. ಯಾಕೆ ನೀನಿನ್ನೂ ಮದುವೆಯಾಗಿಲ್ಲ… ಎಂಬ ಪ್ರಶ್ನಾರ್ಥಕ ಸಾಹಿತ್ಯ ಹೊಂದಿರುವ ಈ ಇಂಗ್ಲಿಷ್​ ಹಾಡು, ನನ್ನ ಸಂಗಾತಿ ಸತ್ತಿರಬಹುದು…ಇಲ್ಲ ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಹಿತ್ಯದೊಂದಿಗೆ ಮುಂದುವರೆಯುತ್ತದೆ. ಯುವ ಗಾಯಕ ಐನಾಟ್​ಶೇನ್ ಹಾಡಿರುವ ಈ ಹಾಡು ಭಗ್ನ ಪ್ರೇಮಿಗಳಿಗೆ ಮಾಡಿಸಿದಂತಹ ಸಾಹಿತ್ಯವನ್ನು ಹೊಂದಿದೆ. ಒಟ್ಟಿನಲ್ಲಿ ತೆರೆಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ನ ಚೆಂದುಳ್ಳಿ ಚೆಲುವೆ ಇದೀಗ ರೀಲ್ಸ್​ ಮೂಲಕ ಭಾವನೆಗಳೊಂದಿಗೆ ಹಾವಭಾವ ತೋರಿಸಿ ಗಮನ ಸೆಳೆದಿದ್ದಾರೆ. ಈ ಇನ್​ಸ್ಟಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ರಮ್ಯಾ ಎಕ್ಸ್​ಪ್ರೆಷನ್​ಗೆ ಭಾರೀ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬುರುಡೆ ಪ್ರಕರಣಕ್ಕೆ ಮತ್ತೊಂದು ಬಿಗ್‌ ಟಿಸ್ಟ್‌: ಮಾಸ್ಕ್‌ಮ್ಯಾನ್ ಸ್ನೇಹಿತನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ದೇವೇಗೌಡರನ್ನ ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌, ಇಳಿಕೆಯತ್ತ ಚಿನ್ನದ ದರ

ರೇಖಾ ಗುಪ್ತಾ ಮೇಲೆ ಕಪಾಳಮೋಕ್ಷ: ಆರೋಪಿ ವಿರುದ್ಧ ದಾಖಲಾಯಿತು ದೊಡ್ಡ ಕೇಸ್‌

ಪ್ರಚೋದನಕಾರಿ ಹೇಳಿಕೆ: ಬಸನಗೌಡ ಪಾಟೀಲ ವಿರುದ್ಧ ಎಫ್‌ಐಆರ್‌

ಮುಂದಿನ ಸುದ್ದಿ
Show comments