Select Your Language

Notifications

webdunia
webdunia
webdunia
webdunia

ಆ.24ರಂದು ಮೊಹಾಲಿಗೆ ಮೋದಿ ಭೇಟಿಗೆ ಸಿದ್ಧತೆ

ಆ.24ರಂದು ಮೊಹಾಲಿಗೆ ಮೋದಿ ಭೇಟಿಗೆ ಸಿದ್ಧತೆ
bangalore , ಭಾನುವಾರ, 21 ಆಗಸ್ಟ್ 2022 (14:23 IST)
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 24ರಂದು ಮೊಹಾಲಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಸಿದ್ಧತೆಗಳನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಈ ಸಿದ್ಧತೆಗಳನ್ನು ಅಂತಿಮಗೊಳಿಸಲು ಡಿಜಿಪಿ ಗೌರವ್ ಯಾದವ್ ಅವರು ಇಂದು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಪ್ರಸ್ತುತ, ಪಂಜಾಬ್ ಪೊಲೀಸರು ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಏಳು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಜವಾನರನ್ನು ನಿಯೋಜಿಸಲು ನಿರ್ಧರಿಸಿದ್ದಾರೆ. ಈ ಭದ್ರತಾ ವ್ಯವಸ್ಥೆಯು ಮೂರರಿಂದ ಐದು ಪದರಗಳನ್ನು ಹೊಂದಿರುತ್ತದೆ. ಯಾವುದೇ ಹೊರಗಿನವರಿಗೆ ಅನುಮತಿಯಿಲ್ಲದೇ ಪ್ರವೇಶಿಸಲು ಸಾಧ್ಯವಿಲ್ಲ. ಇದಲ್ಲದೇ ಈ ಪ್ರದೇಶದಲ್ಲಿ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತೆಯಲ್ಲಿ ಭಾರಿ ಲೋಪ ಉಂಟಾಗಿತ್ತು. ಇದರಿಂದಾಗಿ ಪ್ರಧಾನಿ ಮಧ್ಯದಲ್ಲಿ ದೆಹಲಿಗೆ ಮರಳಬೇಕಾಯಿತು. ಇದೀಗ ರಾಜ್ಯ ಸರ್ಕಾರ ಮತ್ತು ಪಂಜಾಬ್ ಪೊಲೀಸರು ಪ್ರಧಾನಿಯವರ ಭೇಟಿಯನ್ನು ಸುಗಮ ಮತ್ತು ಶಾಂತಿಯುತವಾಗಿ ಇರಬೇಕೆಂದು ಅಗತ್ಯ ಕ್ರಮ ಕೈಗೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ಜೊತೆಗೆ ಹಳೇ ವೈಷಮ್ಯಕ್ಕೆ ತಂದೆಯ ಬಲಿ