ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಸೇವೆಗಳು ಭಾನುವಾರ ಒಂದು ಗಂಟೆಯ ಮಟ್ಟಿಗೆ ತಾಂತ್ರಿಕ ದೋಷದಿಂದ ಡೌನ್ ಆಗಿದ್ದ ಕಾರಣ ಗೂಗಲ್ ಪೇ ಅಥವಾ ಪೇಟಿಂನಂಥ ಪಾವತಿ ಅಪ್ಲಿಕೇಶನ್‌ಗಳ ಬಳಕೆದಾರರಿಗೆ ಯಾವುದೇ ವಹಿವಾಟು ಮಾಡಲು ಆಗಿಲ್ಲ.
ತಾಂತ್ರಿಕ ದೋಷವೊಂದರ ಕಾರಣದಿಂದ ಈ ಅಡಚಣೆ ಆಗಿದೆ. ಯುಪಿಐ ಈಗ ಕಾರ್ಯವಹಿಸುತ್ತಿದ್ದು, ವ್ಯವಸ್ಥೆಯ ಮೇಲೆ ನಿಗಾ ಇಟ್ಟಿದ್ದೇವೆ," ಎಂದು ಎನ್‌ಪಿಸಿಐ ತಿಳಿಸಿದೆ.
ಇದೇ ವೇಳೆ, ಯುಪಿಐನಲ್ಲಿ ಉಂಟಾದ ತಾಂತ್ರಿಕ ದೋಷದ ಬಗ್ಗೆ ದೂರುಗಳನ್ನು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತಮಗೆ ಯಾವುದೇ ವಹಿವಾಟು ನಡೆಸಲು ಆಗುತ್ತಿಲ್ಲ ಎಂದಿದ್ದಾರೆ.