Publish Date: Sun, 15 Sep 2019 (17:52 IST)
Updated Date: Sun, 15 Sep 2019 (17:54 IST)
ಬರ್ತಡೇ ಆಚರಿಸಿಕೊಳ್ಳೋಕೆ ಮುಂದಾಗಿರೋ ರಿಯಲ್ ಸ್ಟಾರ್ ಈ ಬಾರಿ ತಮ್ಮ ಜನುಮದಿನಕ್ಕೆ ಅಭಿಮಾನಿಗಳು ವಿಶೇಷ ಉಡುಗೊರೆ ನೀಡಬೇಕೆಂದು ಕೋರಿಕೆ ಇಟ್ಟಿದ್ದಾರೆ.
ಸೆ. 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಬರ್ತಡೇ. ಹಾರ, ತುರಾಯಿ, ಕೇಕ್ ಗಳನ್ನು ಯಾರೂ ತರೋದು ಬೇಡವೇ ಬೇಡ ಅಂದಿದ್ದಾರೆ.
ಬರ್ತಡೇ ವಿಷ್ ಮಾಡೋಕೆ ಬಂದೋರು ನನಗೊಂದು ಗಿಡ ತಗೊಂದು ಬನ್ನಿ. ಅದನ್ ನಾನೇ ಬೆಳೆಸ್ತೇನೆ ಅಂತ ನಟ ಉಪೇಂದ್ರ ಆಫರ್ ಕೊಟ್ಟಿದ್ದಾರೆ.
ಉಪೇಂದ್ರ ಅವರ ಮುಂದಿನ ಸಿನಿಮಾ ‘ಕಬ್ಜಾ’ ಹೆಸರಿನಿಂದ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗ್ತಿದೆ.