Publish Date: Thu, 18 Jul 2019 (13:36 IST)
Updated Date: Thu, 18 Jul 2019 (13:39 IST)
ಬೆಂಗಳೂರು : ಸದನದ ಕಲಾಪಕ್ಕೂ ಮೊದಲು ಅತೃಪ್ತ ಶಾಸಕರು ವಿಡಿಯೋವೊಂದನ್ನು ರಿಲೀಸ್ ಮಾಡಿ ಶಾಸಕ ರಾಮಲಿಂಗಾ ರೆಡ್ಡಿಯವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ವಿಡಿಯೋದಲ್ಲಿ ಎಸ್.ಟಿ ಸೋಮಶೇಖರ್ ಅವರು ಮಾತನಾಡಿ, ರಾಜೀನಾಮೆ ನೀಡುವ ಮೊದಲು ನಾನು, ಮುನಿರತ್ನ, ಭೈರತಿ ಹಾಗೂ ರಾಮಲಿಂಗಾರೆಡ್ಡಿ ನಾಲ್ವರು ಒಟ್ಟಾಗಿ ಕುಳಿತು ಚರ್ಚೆ ನಡೆಸಿ ರಾಜೀನಾಮೆ ನೀಡಿದ ಮೇಲೆ ಯಾವುದೇ ಕಾರಣಕ್ಕೂ ವಾಪಾಸ್ಸು ಪಡೆಯುವುದಿಲ್ಲ ಎಂದು ಹೇಳಿದ್ದೇವೆ.
ಆದರೆ ಇದೀಗ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ರಾಜಕೀಯನಾಯಕರ ಒತ್ತಡಕ್ಕೆ ಮಣಿದು ರಾಜೀನಾಮೆಯನ್ನು ವಾಪಸ್ಸು ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ನಾವು ಅವರಂತೆ ವಾಪಸ್ಸು ಪಡೆದುಕೊಳ್ಳುವುದಿಲ್ಲ. ಅವರನ್ನು ಫಾಲೋ ಮಾಡುವುದಿಲ್ಲ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.