Publish Date: Thu, 02 Sep 2021 (15:30 IST)
Updated Date: Thu, 02 Sep 2021 (15:32 IST)
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ವಿವಿಧ ಕಾಮಗಾರಿಗಳ ಉದ್ಘಾಟನೆ ಅಂಗವಾಗಿ ಬೆಣ್ಣೆ ನಗರಿ ದಾವಣಗೆರೆಗೆ ಮಧ್ಯಾಹ್ನ ಆಗಮಿಸಿದ್ದಾರೆ.
ಜಿಲ್ಲೆಯಲ್ಲಿ ಐದು ಕಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಷಾ ಭಾಗಿಯಾಗಲಿದ್ದಾರೆ. ದೆಹಲಿಯಿಂದ ಹುಬ್ಬಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ನಂತರ ದಾವಣಗೆರೆಗೆ ಮಧ್ಯಾಹ್ನ 2.50ಕ್ಕೆ ಜಿಎಂಐಟಿ ಕಾಲೇಜ್ ಹೆಲಿಪ್ಯಾಡ್ ಗೆ ಆಗಮಿಸಿದರು.
ಮಧ್ಯಾಹ್ನ 3.05ಕ್ಕೆ ಗಾಂಧಿ ಭವನ ಉದ್ಘಾಟನೆ ಮಾಡಿ ಅಲ್ಲಿಂದ 3.25ಕ್ಕೆ ಸ್ಕೌಟ್ ಅಂಡ್ ಗೈಡ್ಸ್ ಆವರಣದಲ್ಲಿರುವ ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ ಗೌರವಾರ್ಪಣೆ ಮಾಡುವರು.3.45 ಪೊಲೀಸ್ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಮಾಡಿ 4.35 ಕ್ಕೆ ಜಿಎಂಐಟಿ ಕಾಲೇಜು ಅವರರಣದಲ್ಲಿ ನಿರ್ಮಾಣವಾದ ಜಿಎಂಐಟಿ ಕೇಂದ್ರ ಗ್ರಂಥಾಲಯ ಉದ್ಘಾಟನಾ ಮಾಡಿದರು.
ಸಂಜೆ 5 ಗಂಟೆಗೆ ಹುಬ್ಬಳಿಗೆ ಜಿಎಂಐಟಿ ಹೆಲಿಪ್ಯಾಡ್ ನಿಂದ ತೆರಳಿದ್ದಾರೆ. ಅಮಿತ್ ಷಾ ಆಗಮನ ಹಿನ್ನೆಲೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು 5 ಸ್ಥಳಗಳಲ್ಲೂ ಸ್ವಚ್ಛತೆ ಹಾಗೂ ಪೊಲೀಸ್ ರ ರಕ್ಷಣೆ ಒದಗಿಸಲಾಗಿದೆ.