Select Your Language

Notifications

webdunia
webdunia
webdunia
webdunia

ನೆರೆ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ ಸಚಿವ ಬಸವರಾಜ

karnataka
davanagere , ಶುಕ್ರವಾರ, 6 ಆಗಸ್ಟ್ 2021 (18:47 IST)
ದಾವಣಗೆರೆ : ಕೊರೊನಾ ನಿಯಂತ್ರಣ ಮತ್ತು ಮಳೆ ಹಾನಿ ಪರಿಹಾರ ನೀಡುವ ಸಲುವಾಗಿ ದಾವಣಗೆರೆ ಜಿಲ್ಲೆಯ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವರಾದ ಬಿ.ಎ.ಬಸವರಾಜ ಶುಕ್ರವಾರ ಬೆಳಿಗ್ಗೆ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರೊಂದಿಗೆ  ಮಾತನಾಡಿದರು.
 
ಮಳೆಯಿಂದಾಗಿ ಜೀವನ ಅಸ್ತವ್ಯಸ್ತತೆ ಯಾಗಿದೆ ಎಂದು ಗ್ರಾಮಸ್ಥರು
ತಮ್ಮ ಅಳಲನ್ನು ಸಚಿವರ ಬಳಿ ತೊಡಿಗಕೊಂಡರು. 
ಗ್ರಾಮದಲ್ಲಿ ಹಾನಿಗೊಳಗಾದ ಕೆಲ ಸ್ಥಳಗಳನ್ನು ವೀಕ್ಷಣೆ ಮಾಡಲು ಮ‌ೂಲಕ ನೈಜ ಪರಿಸ್ಥಿತಿಯನ್ನು ಅವಲೋಕಿಸಿದ ಬಸವರಾಜ ಅವರು ಸ್ಥಳದಲ್ಲಿನ ಇದ್ದ ಜಿಲ್ಲಾಧಿಕಾರಿ ಶ್ರೀ ಮಹಾಂತೇಶ್ ಬೀಳಗಿ, ಹರಿಹರ ತಹಶಿಲ್ದಾರ ಹಾಗೂ ಇತರೆ ಅಧಿಕಾರಿ ವರ್ಗದವರಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.
 
ಮನೆ ಕಳೆದುಕೊಂಡವರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಲು ಹಾಗೂ ಅವರಿಗೆ ಊಟದ ವ್ಯವಸ್ಥೆ ಮತ್ತು ಹಾನಿಗೆ ತಕ್ಕಂತೆ ಪರಿಹಾರ ಒದಗಿಸಲು ಸಚಿವರು ಜಿಲ್ಲಾಡಳಿತಕ್ಕೆ ಆದೇಶಿಸಿದರು.
 
ಜಿಲ್ಲಾ ಪಂಚಾಯತ ಸಿಇಓ ವಿಜಯ ಮಹಾಂತೇಶ್, ಪೋಲಿಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಸೇರಿದಂತೆ ಹಲ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ 40 ವರ್ಷಗಳಿಂದ ಅತಿಕ್ರಮಿಸಿದ್ದ ಜಮೀನು ವಶ!