ಸಿಲಿಕಾನ್ ಸಿಟಿಯಲ್ಲಿ ಇಂದು ಕೋವಿಡ್ ತಂದ ಫಜೀತಿ ಅಷ್ಟಿಷ್ಟಿಲ್ಲ. ರಾಜ್ಯಾದ್ಯಂತ ಕೋವಿಡ್ ಹಬ್ಬರ ಹೆಚ್ಚಾಗ್ತಿದೆ. ಹೀಗಾಗಿ ಕೋವಿಡ್ ಸೋಂಕು ಹೆಚ್ಚು ಉಲ್ಬಣವಾಗದಂತೆ ಈಗಾಗಲೇ ಕಡಿವಾಣ ಹಾಕಲು ಸರ್ಕಾರದಿಂದ ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಅಂದ ಹಾಗೆ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಕುರಿತು ಮಾತನಾಡಿದರು.
9 ಗಡಿ ಜಿಲ್ಲಿಗಳಲ್ಲಿ ಲಾಕ್ ಡೌನ್ ಘೋಷಣೆಗೆ ಸೂಚಿಸಿದರು. ಅಷ್ಟೇ ಅಲ್ಲದೆ ಕೇರಳ, ಮಹಾರಾಷ್ಟ್ರ, ಗಡಿ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ , ವೀಕೆಂಡ್ ಕರ್ಫ್ಯೂ ಘೋಷಣೆಗೆ ಸೂಚಿಸಿದರು. ಇನ್ನೂ ಇಂದಿನಿಂದ ರಾತ್ರಿ 9 ಗಂಟೆಯಿಂದ ಬೆಳ್ಳಿಗೆ 5 ಗಂಟೆವರೆಗೆ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ .
ಹೀಗಾಗಿ ಪೋಲಿಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಇನ್ನೂ ಮೂರನೇ ಅಲೆ ಮಕ್ಕಳನ್ನೇ ಟಾರ್ಗೆಟ್ ಮಾಡೋದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.3 ನೇ ಅಲೆಗೆ ಬಿಬಿಎಂಪಿ ಸಹ ಸಿದ್ಧತೆ ಮಾಡಿಕೊಂಡಿದೆ.ಇದೆ ಮೊದಲ ಬಾರಿಗೆ ರಾಜಧಾನಿಯಲ್ಲಿ ಮೊದಲ ಮಕ್ಕಳ ಆರೈಕೆ ಕೇಂದ್ರ ಕೂಡ ತೆರೆಯಲಾಗಿದೆ. ನಗರದ ದಕ್ಷಿಣ ವಲಯದ ಕೇಂದ್ರದಲ್ಲಿ 40 ಹಾಸಿಗೆ ಸಿದ್ದ ಮಾಡಲಾಗಿದೆ. ಪದ್ಮನಾಭ ನಗರದ ರಿಜಿನಲ್ ಮ್ಯಾನೇಜ್ಮೆಂಟ್ ಕೋಅಪರೇಟ್ ಕೇಂದ್ರದಲ್ಲಿ ಮಕ್ಕಳ CCCಸಾಮಾನ್ಯ ಹಾಸಿಗೆ ಹಾಗೂ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಬೇಸರ ಉಂಟಾಗದಿರದಂತೆ ಡೋರಾಮನ್ , ಸೈಡರ್ , ಕಾಟುನ್ 3D ವಾಲ್ ಪೇಪರ್ ನಿರ್ಮಾಣ ಕೂಡ ಮಾಡಲಾಗಿದೆ.ಮಕ್ಕಳಿಗೆ ವಿಶೇಷ ಪ್ಲೇ ಏರಿಯಾ ಕೂಡ ಸಿದ್ಧತೆ ಮಾಡಿಕೊಂಡಿದೆ.ಪ್ರಾಯೋಗಿಕವಾಗಿ ದಕ್ಷಿಣ ವಲಯದಲ್ಲಿ ಸ್ಥಾಪನೆ ಮಾಡಲಾಗಿದೆ.ಇದೆ ರೀತಿ ನಗರದ ಎಲ್ಲಾ ವಲಯದಲ್ಲೂ ತಯಾರಿ ಮಾಡಲು ಬಿಬಿಎಂಪಿ ಪ್ಲಾನ್ ಹೊಂದಿದೆ. ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಆತಂಕ ಕೂಡ ಹೆಚ್ಚಾಗಿದ್ದು, 29 ವರ್ಷದ ವ್ಯಕ್ತಿಗೆ ಡೆಲ್ಟಾ ವೈರಸ್ ತಗ್ಗಲಿದ್ದು, ವ್ಯಕ್ತಿ ಸುಳ್ಳು ಮಾಹಿತಿ ನೀಡಿ ನಾಪತ್ತೆಯಾಗಿದ್ದ . ಕೊನೆಗೆ ವ್ಯಕ್ತಿಯ ಪತ್ತೆಗಾಗಿ ಶೋಧ ಕಾರ್ಯ ಪೊಲೀಸರು ನಡೆಸಿದ್ದಾರೆ...ಒಟ್ನಲಿ ಇಷ್ಟೇಲ್ಲಾ ಬೆಳವಣಿಗೆಯ ನಡುವೆ ಕೋವಿಡ್ ಆರ್ಭಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿ ಕ್ರಮ ಕೈಗೊಂಡಿದೆ.