Select Your Language

Notifications

webdunia
webdunia
webdunia
webdunia

ಆಫ್ಘನ್ ರಕ್ಷಣಾ ಸಚಿವರ ಗುರಿಯಾಗಿಸಿ ದಾಳಿ: ಎಂಟು ಮಂದಿ ಸಾವು!

ಆಫ್ಘಾನಿಸ್ತಾನ
ಕಾಬೂಲ್(ಆ.05): ಆಫ್ಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡ ಘಟನೆ ನಡೆದಿದೆ.

* ಆಫ್ಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರ ದಾಳಿ
* ಬಾಂಬ್ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತ, 20 ಮಂದಿಗೆ ಗಾಯ
* ಬಿಸ್ಮಿಲ್ಲಾ ಖಾನ್ ಮುಹಮ್ಮದಿ ಅವರನ್ನು ಗುರಿಯಾಗಿಸಿ ಅವರ ಅತಿಥಿ ಗಹದ ಸಮೀಪ ಈ ದಾಳಿ
ಮಂಗಳವಾರ ಮಧ್ಯರಾತ್ರಿ ಸಚಿವ ಬಿಸ್ಮಿಲ್ಲಾ ಖಾನ್ ಮುಹಮ್ಮದಿ ಅವರನ್ನು ಗುರಿಯಾಗಿಸಿ ಅವರ ಅತಿಥಿ ಗಹದ ಸಮೀಪ ಈ ದಾಳಿ ನಡೆಸಲಾಗಿದೆ. ಆದರೆ ದಾಳಿ ವೇಳೆ ಅವರು ಸ್ಥಳದಲ್ಲಿರಲಿಲ್ಲ. ಹೀಗಾಗಿ ಸಚಿವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ದಾಳಿ ಬಳಿಕ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಸಂಪೂರ್ಣ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ. ಇತ್ತೀಚಿಗೆ ಆಫ್ಘಾನ್ ಪಡೆ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಮತ್ತೆ 22,000 ಕೇಸ್, ಆದರೂ ನಿರ್ಬಂಧ ಸಡಿಲಿಕೆ!