ಕೋರೋನಾ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಜಿಲ್ಲಾಡಳಿತ ಆಗಸ್ಟ್ 16 ರವರೆಗೆ ನೈಟ್ ಕರ್ಫ್ಯೂ ಮುಂದುವರಿಯಲಿದ್ದು, ಧಾರ್ಮಿಕ ಕಾರ್ಯಗಳಿಗೆ ತಡೆ ವಿಧಿಸಿದ್ದು, ದೇವಸ್ಥಾನಗಳಿಗೆ ಭಕ್ತರ ನಿಬರ್ಂಧ ವಿಧಿಸಿ ಆದೇಶಿಸಿದೆ.
	ವೀಕೆಂಡ್ ದಿನಗಳಾದ ಶನಿವಾರ ಭಾನುವಾರ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದ್ದು, ಕೇವಲ ಅರ್ಚಕರಿಗೆ ಪೂಜೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.