Select Your Language

Notifications

webdunia
webdunia
webdunia
webdunia

ಸರಕಾರದಿಂದ ಬಿತ್ತನೆ ಬೀಜಕ್ಕೆ ಏಕರೂಪ ಬೆಲೆ ನಿಗದಿ

ಸರಕಾರದಿಂದ ಬಿತ್ತನೆ ಬೀಜಕ್ಕೆ ಏಕರೂಪ ಬೆಲೆ ನಿಗದಿ
ಶಿರಸಿ , ಸೋಮವಾರ, 4 ಮೇ 2020 (14:38 IST)
ರೈತರಿಗೆ ಬೇಕಾದ ಬಿತ್ತನೆ ಬೀಜಕ್ಕೆ ಸರ್ಕಾರವೇ ಬೆಲೆ‌ ನಿಗದಿಪಡಿಸಲಿದೆ ಎಂದು ಕೃಷಿ ಸಚಿವ ಹೇಳಿದ್ದಾರೆ.

ಮುಂದಿನ ವರ್ಷದಿಂದ ರೈತರಿಗೆ ಬೇಕಾದ ಬಿತ್ತನೆ ಬೀಜಕ್ಕೆ ಸರ್ಕಾರವೇ ಬೆಲೆ‌ ನಿಗದಿಪಡಿಸಲಿದ್ದು, ಏಕರೂಪ ಬೆಲೆ ಜಾರಿಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಫಸಲ್ ಭೀಮಾ ಯೋಜನೆಯದ್ದು ಸಮಸ್ಯೆಯಾಗಿದೆ, ಇದಕ್ಕಾಗಿ ಹೊಸ ತಂತ್ರಾಂಶ ಅಳವಡಿಕೆ ಜಾರಿಯಲ್ಲಿದ್ದು, ಕಂತು ಕಟ್ಟಿದ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ವಿಮೆ ಬರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಯಾವುದೇ ಕಂಪೆನಿಯ ಬಿತ್ತನೆ ಬೀಜ ಐಸಿಸಿಎಯಲ್ಲಿ ರಿಜಿಸ್ಟರ್ ಆದ ಬಿತ್ತನೆ ಬೀಜ ರಸಗೊಬ್ಬರವನ್ನು ಮಾತ್ರವೇ ಮಾರಾಟ ಮಾಡಬೇಕು. ಅಕ್ರಮ- ಕಳಪೆ ಗುಣಮಟ್ಟ ರಹಿತ ಬೀಜ ಪತ್ತೆ ಮಾಡಿ ರೈತರಿಗೆ ಉಪಯೋಗಕಾರಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದರು.

ಬಿತ್ತನೆ ಬೀಜ, ರಸಗೊಬ್ಬರ ನಮ್ಮಲ್ಲಿ ದಾಸ್ತಾನು ಇದೆ. ಯಾವುದೇ ಕೊರತೆಯಿಲ್ಲ.ಅವಶ್ಯಕತೆಗೆ ತಕ್ಕಂತೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲಾಗುವುದು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೀಯರ್ ಕೊಳ್ಳೋದಕ್ಕೆ ಮುಗಿಬಿದ್ದ ಹುಡುಗಿಯರು