Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರಕ್ಕೆ ನೀರು ಹರಿಸುವೆ ಎಂದ ಸಿಎಂ ವಿರುದ್ಧ ಕಿಡಿಕಾರಿದ ಉಮೇಶ್ ಕತ್ತಿ

ಮಹಾರಾಷ್ಟ್ರಕ್ಕೆ ನೀರು ಹರಿಸುವೆ ಎಂದ ಸಿಎಂ ವಿರುದ್ಧ ಕಿಡಿಕಾರಿದ ಉಮೇಶ್ ಕತ್ತಿ
ಬೆಳಗಾವಿ , ಶುಕ್ರವಾರ, 18 ಅಕ್ಟೋಬರ್ 2019 (11:02 IST)
ಬೆಳಗಾವಿ : ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಹೇಳಿಕೆಗೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ.




ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಮೊದಲು ಕೃಷ್ಣಾ ನದಿಯ ಬಿ ಸ್ಕೀಮ್, 740 ಟಿಎಂಸಿ ನೀರು ಬಳಕೆಗೆ ಯಡಿಯೂರಪ್ಪ ಯೋಚನೆ ಮಾಡಲಿ. ಅದನ್ನ ಬಿಟ್ಟು ಮಹಾರಾಷ್ಟ್ರದ ಚುನಾವಣೆಯಲ್ಲಿ ಯಡಿಯೂರಪ್ಪ ಈ ರೀತಿ ಹೇಳುವುದು ಸರಿಯಲ್ಲ. ಯಡಿಯೂರಪ್ಪ ಮೊದಲು ಕರ್ನಾಟಕದ ನೀರಾವರಿ ಬಗ್ಗೆ ಯೋಚನೆ ಮಾಡಲಿ ಎಂದು ಗುಡುಗಿದ್ದಾರೆ.


ಯಡಿಯೂರಪ್ಪನವರು ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ದಯವಿಟ್ಟು ಉತ್ತರ ಕರ್ನಾಟಕ ಹಾಳು ಮಾಡುವ ಯೋಚನೆ ಮಾಡಬೇಡಿ. ನಾನು ಮತ್ತೆ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತವರು ಜಿಲ್ಲೆ ಅಭಿವೃದ್ಧಿಗೆ ಪ್ರತ್ಯೇಕ ಅಧಿಕಾರಿಯನ್ನ ನೇಮಿಸಿ ತವರು ಪ್ರೇಮ ಮೆರೆದ ಸಿಎಂ