Select Your Language

Notifications

webdunia
webdunia
webdunia
webdunia

ತವರು ಜಿಲ್ಲೆ ಅಭಿವೃದ್ಧಿಗೆ ಪ್ರತ್ಯೇಕ ಅಧಿಕಾರಿಯನ್ನ ನೇಮಿಸಿ ತವರು ಪ್ರೇಮ ಮೆರೆದ ಸಿಎಂ

ತವರು ಜಿಲ್ಲೆ ಅಭಿವೃದ್ಧಿಗೆ ಪ್ರತ್ಯೇಕ ಅಧಿಕಾರಿಯನ್ನ ನೇಮಿಸಿ ತವರು ಪ್ರೇಮ ಮೆರೆದ ಸಿಎಂ
ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2019 (10:55 IST)
ಬೆಂಗಳೂರು : ತವರು ಜಿಲ್ಲೆ ಅಭಿವೃದ್ಧಿಗೆ ಪ್ರತ್ಯೇಕ ಅಧಿಕಾರಿಯನ್ನ ಮೀಸಲಿಟ್ಟಿರುವ  ಮೂಲಕ ಸಿಎಂ ಯಡಿಯೂರಪ್ಪ ಅವರು ತವರೂರಿನ ಮೇಲಿನ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.




ಶಿವಮೊಗ್ಗ ಸಂಸದರು, ಶಾಸಕರ ಕೆಲಸಗಳಿಗೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿದರೆ, ಉಳಿದ ಸಂಸದರು ಎಲ್ಲಾ ಜಿಲ್ಲೆಗಳ ಶಾಸಕರ ಕೆಲಸಗಳಿಗೆ ಮಾತ್ರ ಒಬ್ಬ ಅಧಿಕಾರಿಯನ್ನ ನೇಮಿಸಿದ್ದಾರೆ. ಇದರಿಂದ ಸಿಎಂ ಯಡಿಯೂರಪ್ಪ ಅವರಿಗೆ ತವರಿನ ಮೇಲಿವ ವ್ಯಾಮೋಹ ಇರುವುದು ಎದ್ದು ಕಾಣುತ್ತಿದೆ ಎನ್ನಲಾಗಿದೆ.


ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳಿಗೆ ಜವಾಬ್ದಾರಿ ಮರು ಹಂಚಿಕೆ ಮಾಡಿದ್ದು, ಸಿಎಂ ಜಂಟಿ ಕಾರ್ಯದರ್ಶಿ ಎಂ.ಕೆ.ಶ್ರೀರಂಗಯ್ಯಗೆ ಜಿಲ್ಲೆಯ ಅಭಿವೃದ್ಧಿ ಹೊಣೆ ನೀಡಲಾಗಿದೆ. ಅಲ್ಲದೇ  ಬಿಎಸ್ ವೈ ಸಿಎಂ ಆದ ಬಳಿಕ 3 ಬಾರಿ ಅಧಿಕಾರಿಗಳ ಜವಬ್ದಾರಿ ಮರು ಹಂಚಿಕೆ ಮಾಡಿದ್ದು,  ಸಿಎಂ ಸಚಿವಾಯದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಶಾಸಕರು  ದೂರು ಸಲ್ಲಿಸಿದ ಹಿನ್ನಲೆಯಲ್ಲಿ  ಸಚಿವಾಲಯದ ಅಧಿಕಾರಿಗಳ ಜವಬ್ದಾರಿಯನ್ನು ಸಿಎಂ  ಪರಿಷ್ಕರಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕರಣದ ವಿಚಾರಣೆಗೆಂದು ಕೋರ್ಟ್ ಮೆಟ್ಟಿಲೇರಿವೆ 13 ಗಿಳಿಗಳು