ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿಗೆ ಸೇರುತ್ತಾರೆ ಎಂದು ಹೇಳಲಾಗುತ್ತಿರುವ ಶಾಸಕ ಉಮೇಶ್ ಜಾಧವ್ ಕ್ಷೇತ್ರದ ಜನರೊಂದಿಗೆ ಚರ್ಚೆ ತೀವ್ರಗೊಳಿಸಿದ್ದಾರೆ.
									
			
			 
 			
 
 			
					
			        							
								
																	ಮುಂಬೈನಲ್ಲಿ ನೆಲೆಸಿರುವ ಕ್ಷೇತ್ರದ ಜನರೊಂದಿಗೆ ಶಾಸಕ ಉಮೇಶ್ ಜಾಧವ್ ಚರ್ಚೆ ನಡೆಸುತ್ತಿದ್ದಾರೆ. ಈಗಾಗಲೇ ವಿವಿಧ ಪ್ರದೇಶಗಳಲ್ಲಿ 20 ಸಾವಿರಕ್ಕೂ ಅಧಿಕ ಮತದಾರರೊಂದಿಗೆ ಚರ್ಚೆ ನಡೆಸಿದ್ದಾರೆ.
									
										
								
																	ಮುಂಬೈ ಯಲ್ಲಿ ನೆಲೆಸಿರುವ ಕಲಬುರಗಿ ಮೂಲದ ಮತದಾರರನ್ನು ಭೇಟಿ ಮಾಡಿದ್ದಾರೆ. ಸುಮಾರು 20 ಸಾವಿರಕ್ಕೂ  ಹೆಚ್ಚಿನ  ಬಂಜಾರಾ ಮತದಾರರ ಜೊತೆ ಮಾತುಕತೆ ನಡೆಸಿದ್ದಾರೆ. ರಾತ್ರಿ ವೇಳೆ ಮುಂಬೈ ಸುತ್ತಾಡಿ ವೊಟರ್ಸ್ ಭೇಟಿ ಮಾಡಿದ ಜಾಧವ್ ಬೆಂಬಲ ಕೋರುತ್ತಿದ್ದಾರೆ. ಹೀಗಂತ ಶಾಸಕ ಉಮೇಶ್ ಜಾಧವ ಅವರ ಸಹೋದರ ರಾಮಚಂದ್ರ ಜಾಧವ್ ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದಾರೆ.