Select Your Language

Notifications

webdunia
webdunia
webdunia
webdunia

ಪಿಯುಸಿಯಲ್ಲಿ ಉಮೇಶ್ ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರೇ ಕಾರಣವಂತೆ

ಪಿಯುಸಿಯಲ್ಲಿ ಉಮೇಶ್ ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರೇ ಕಾರಣವಂತೆ
ಕಲಬುರಗಿ , ಬುಧವಾರ, 8 ಮೇ 2019 (12:34 IST)
ಕಲಬುರಗಿ : ಕಾಂಗ್ರೆಸ್ ನಾಯಕರು ಮಾಡಿದ ಆರೋಪದಿಂದ ನನ್ನ ಮಗಳ ಮೇಲೆ ಪರಿಣಾಮ ಬೀರಿ ಆಕೆ ಪಿಯುಸಿಯಲ್ಲಿ ಫೇಲ್ ಆಗಿದ್ದಾಳೆ  ಎಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಆರೋಪ ಮಾಡಿದ್ದಾರೆ.




ಚಿಂಚೋಳಿಯ ಚಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಸುಳ್ಳು ಆರೋಪಗಳಿಂದ ಕುಟುಂಬದವರು ಬೇಸರಗೊಂಡಿದ್ದಾರೆ. ಇದರಿಂದ ನನ್ನ ಮಗಳಿಗೆ ಕಾಲೇಜಿನಲ್ಲಿ ಅವಮಾನವಾಗಿದೆ. ಉತ್ತಮವಾಗಿ ಓದುತ್ತಿದ್ದ ಆಕೆ ಮಾನಸಿಕವಾಗಿ ಕುಗ್ಗಿದ್ದು, ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ಇದಕ್ಕೆಲ್ಲ ಕಾಂಗ್ರೆಸ್ ನಾಯಕರ ಆರೋಪವೇ ಕಾರಣ ಎಂದು ಹೇಳಿದ್ದಾರೆ.


ಉಮೇಶ್ ಜಾಧವ್ 50 ಕೋಟಿ ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಹಲವು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪಿಸಿದ್ದರು. ಈ ರೀತಿ ವೈಯಕ್ತಿಕ ಆರೋಪದಿಂದ ನನ್ನ ಕುಟುಂಬ ಸಾಕಷ್ಟು ಹಿನ್ನಡೆ ಅನುಭವಿಸುವಂತೆ ಆಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯ ಕೇಳಿ ಬಂದ ಯುವತಿಗೆ ನನ್ನ ಜೊತೆ ಅಡ್ಜೆಸ್ಟ್ ಮಾಡ್ಕೋ ಎಂದ ಪೊಲೀಸ್ ಪೇದೆ