Select Your Language

Notifications

webdunia
webdunia
webdunia
webdunia

ಪ್ರೀತಿಸೋದನ್ನು ಸಿದ್ದರಾಮಯ್ಯನವರನ್ನು ನೋಡಿ ಕಲಿಯಬೇಕು: ಉಮಾಶ್ರೀ

Umashree-Siddaramaiah

Krishnaveni K

ಬೆಂಗಳೂರು , ಮಂಗಳವಾರ, 21 ಅಕ್ಟೋಬರ್ 2025 (14:43 IST)
Photo Credit: Instagram
ಬೆಂಗಳೂರು: ಪ್ರೀತಿಸೋದು ಹೇಗೆ ಎಂದು ಸಿದ್ದರಾಮಯ್ಯನವರನ್ನು ನೋಡಿ ಕಲಿಯಬೇಕು ಎಂದು ಹಿರಿಯ ನಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಟಾಕಿಂಗ್ ಪ್ಯಾರೆಟ್ಸ್ ಎನ್ನುವ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಉಮಾಶ್ರೀ ತಮ್ಮ ರಾಜಕೀಯ ಜೀವನ, ವೈಯಕ್ತಿಕ ಜೀವನ, ರಾಜಕೀಯ ಜೀವದ ಆದರ್ಶ ವ್ಯಕ್ತಿಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಕೆಲವು ಸಂದರ್ಶಕಿ ಕೆಲವು  ವ್ಯಕ್ತಿಗಳ ಹೆಸರು  ಹೇಳಿದ್ದು, ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದಿದ್ದಾರೆ.

ಈ ವೇಳೆ ಸಿದ್ದರಾಮಯ್ಯನವರ ಹೆಸರು ಹೇಳಿದಾಗ ಉಮಾಶ್ರೀಯವರು ‘ಅಬ್ಬಾ.. ಅವರು ಅದೆಂಥಾ ಗ್ರೇಟ್ ಪರ್ಸನಾಲಿಟಿ, ಮಾನವತಾವಾದಿ. ಅವರ ಬಗ್ಗೆ ನನ್ನಂಥವಳು ಮಾತನಾಡಕ್ಕೆ ಪದಗಳು ಸಾಲೋದಿಲ್ಲ. ಅಂಥಾ ಒಂದು ವ್ಯಕ್ತಿತ್ವ. ಅವರನ್ನು ಅವರು ಇವರು ಏನೇನೆಲ್ಲಾ ಹೇಳಬಹುದು. ಆದರೆ ಅವರನ್ನು ಹತ್ತಿರ ಇದ್ದು ಕಂಡವರಿಗೆ ಅವರು ಏನೆಂದು ಗೊತ್ತಿರುತ್ತದೆ. ಪ್ರೀತಿಯನ್ನು ಹಂಚುವುದನ್ನು ಅವರನ್ನು ನೋಡಿ ಕಲಿಯಬೇಕು. ಅಯ್ಯೋ.. ಎಷ್ಟು ಚಂದ, ಗ್ರಾಮ್ಯ ಪಕ್ಕಾ ಗ್ರಾಮೀಣ. ಅವರು ಬೈದ್ರೂ ಸಹಿತ ಸ್ವೀಟ್ ಆಗಿರುತ್ತದೆ. ಅಂತಹ ಪ್ರೀತಿ. ಅವರು ಈ ರಾಜ್ಯಕ್ಕೆ ಕೊಟ್ಟ ಕೊಡುಗೆ, ಎಲ್ಲರನ್ನೂ ಸಮಾನವಾಗಿ ಕಾಣುವ ರೀತಿ, ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕೊಡುವುದು ಇರಬಹುದು, ಅವರನ್ನು ನಂಬಿದವರನ್ನು ಕೈ ಹಿಡಿದು ನಡೆಸುವುದು ಇರಬಹುದು... ಸಾಧ್ಯವಿಲ್ಲ, ಅವರ ಮಟ್ಟಕ್ಕೆ ಸಾಧ್ಯವೇ ಇಲ್ಲ’ ಎಂದು ಕೊಂಡಾಡಿದ್ದಾರೆ.

ಇನ್ನು, ಬಂಗಾರಪ್ಪನವರು ನನ್ನ ದೇವರು ಎಂದಿರುವ ಉಮಾಶ್ರೀ ಮಲ್ಲಿಕಾರ್ಜುನ ಖರ್ಗೆ, ಎಸ್ಎಂ ಕೃಷ್ಣ, ಧರಂ ಸಿಂಗ್ ಇವರೆಲ್ಲರೂ ಒಂದು ರೀತಿಯಲ್ಲಿ ಜನಪರವಾದ ಶಕ್ತಿಗಳು ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ ಡಿಎ ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ: ನಾಲಿಗೆ ಹರಿಬಿಟ್ಟ ಪ್ರದೀಪ್ ಈಶ್ವರ್