Publish Date: Sat, 03 Nov 2018 (15:54 IST)
Updated Date: Sat, 03 Nov 2018 (15:56 IST)
ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮತ ಚಲಾಯಿಸುವ ಫೋಟೋವನ್ನ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಕಿಡಗೇಡಿಗಳು ಹರಿ ಬಿಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ತುಂಬೆಲ್ಲ ಫೋಟೋಗಳು ಹರಿದಾಡುತ್ತಿವೆ.
ಮತಗಟ್ಟೆಯಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ನಿಷೇಧವಿದೆ. ಆದರೂ ಮತಗಟ್ಟೆಯಲ್ಲಿ ಮೊಬೈಲ್ ಸಂಚಾರ ಸರ್ವೇ ಸಾಮಾನ್ಯ ಎಂಬಂತಾಗಿದೆ. ಮತಗಟ್ಟೆಯ ಅಧಿಕಾರಿಗಳ ನಿರ್ಲಕ್ಷವೇ ಕಿಡಿಗೇಡಿಗಳ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.