Select Your Language

Notifications

webdunia
webdunia
webdunia
webdunia

ಸರ್ದಾರ್ ವಲ್ಲಭಾಯಿ ಪಟೇಲ್ ರ ಏಕತೆಯ ಪ್ರತಿಮೆ ಅನಾವರಣಕ್ಕೂ ಮೊದಲು ಮೋದಿ ಫೋಟೋ ಸೆಷನ್

ನವದೆಹಲಿ , ಬುಧವಾರ, 31 ಅಕ್ಟೋಬರ್ 2018 (10:33 IST)
ನವದೆಹಲಿ: ಗುಜರಾತ್ ನ ನರ್ಮದಾದಲ್ಲಿ ಇಂದು ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ ಶಿಲ್ಪಿ ಸರ್ದಾರ್ ವಲ್ಲಭಾಯಿ ಪಟೇಲ್ ರ ವಿಶ್ವದ ಅತೀ ಎತ್ತರದ ಏಕತೆಯ ಪ್ರತಿಮೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಈ ಪ್ರತಿಮೆ ಸ್ಥಾಪನೆಗೆ ಕಾರಣರಾದವರ ಜತೆಗೆ ಫೋಟೋ ಸೆಷನ್ ಮಾಡಿದ್ದಾರೆ. ಅಷ್ಟೇ ಅಲ್ಲ ಪಟೇಲ್ ಪ್ರತಿಮೆ ಎದುರು ತಮ್ಮ ಎಂದಿನ ಶೈಲಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

ಏಕತೆಯ ಪ್ರತಿಮೆ ಜತೆಗೆ ಸರ್ದಾರ್ ಪಟೇಲ್ ರ ಜೀವನ ಕುರಿತಾದ ವಸ್ತು ಸಂಗ್ರಹಾಲಯ, ವಸ್ತು ಪ್ರದರ್ಶನ ಇತ್ಯಾದಿ ಪ್ರಮುಖ ಆಕರ್ಷಣೆಯಾಗಿದ್ದು, ಇದೊಂದು ಅತ್ಯುತ್ತಮ ಪ್ರವಾಸೀ ತಾಣವಾಗಲಿದೆ. ಈ ಪ್ರತಿಮೆಯ ಎತ್ತರ 182 ಮೀ. ಆಗಿದ್ದು, ವಿಶ್ವದ ಅತೀ ಎತ್ತರದ ಪ್ರತಿಮೆ ಎನ್ನುವ ಗೌರವಕ್ಕೆ ಪಾತ್ರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಿಜೋರಾಂ ಹೆಸರು ತಪ್ಪಾಗಿ ಹೇಳಿದ ರಾಹುಲ್ ಗಾಂಧಿಗೆ ಇಂಪೋಸಿಷನ್ ಬರೆಯಿರಿ ಎಂದ ಬಿಜೆಪಿ