Publish Date: Sun, 04 Nov 2018 (17:45 IST)
Updated Date: Sun, 04 Nov 2018 (17:47 IST)
ಕಳೆದ 15 ದಿನಗಳಿಂದ ಎಡಬಿಡದೇ ಪ್ರಚಾರ, ಬಹಿರಂಗ ಸಭೆಗಳಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಇಂದು ರಿಲಾಕ್ಸ್ ಮೂಡ್ ನಲ್ಲಿದ್ದರು.
ಬೆಳ್ಳಿಗ್ಗೆ 7.30 ಕ್ಕೆ ಸ್ನಾನ ಮುಗಿಸಿ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದು ಕಂಡುಬಂತು. ಕಳೆದ ಎರಡು ವಾರಗಳಿಂದ ಬಿಡುವಿಲ್ಲದ ಪ್ರಚಾರ ಇತ್ತು. ಭಾರೀ ಮಳೆ ಬಂದು ನಿಂತ ಮೇಲೆ ಪರಿಸ್ಥಿತಿ ಹೇಗಿರುತ್ತದೆಯೋ ಹಾಗೆ ಇಂದಿನ ದಿನವಾಗಿದೆ ಎಂದರು.
ರಾಜಕಾರಣ ಎನ್ನುವುದನ್ನು ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಇದೊಂದು ತಪ್ಪಸ್ಸಿನಂತೆ ಪಡೆಯಬೇಕಿದೆ ಎಂದರಲ್ಲದೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.