Publish Date: Sat, 27 Oct 2018 (19:07 IST)
Updated Date: Sat, 27 Oct 2018 (19:09 IST)
ಗಣಿ ನಾಡಿನಲ್ಲಿ ಲಗ್ಗೆ ಇಟ್ಟಿರುವ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಭರ್ಜರಿ ಪ್ರಚಾರ ನಡೆಸಿದರು.
ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ನಡೆಸಿದರು. ರೋಡ್ ಶೋ ನಲ್ಲಿ ಪಾಲ್ಗೊಳ್ಳುವ ಮೂಲಕ ಮತಯಾಚನೆ ನಡೆಸಿದರು.
ಬಳ್ಳಾರಿ ಉಪಚುನಾವಣೆಯಲ್ಲಿ ಕದನ ಇರುವುದು ಶಾಂತಕ್ಕ ಹಾಗೂ ಉಗ್ರಪ್ಪ ನಡುವೆ. ಸಂಸತ್ತಿನಲ್ಲಿ ಘರ್ಜನೆ ಮಾಡುವ ಉಗ್ರಪ್ಪ ಬೇಕಾ? ಇಲ್ಲವೇ ಟಿಎ, ಡಿಎ ತೆಗೆದುಕೊಳ್ಳುವ ಶಾಂತಕ್ಕ ಬೇಕಾ? ಯೋಚಿಸಿ ನಿರ್ಧಾರ ಮಾಡಿ ಎಂದು ವ್ಯಂಗ್ಯವಾಡಿದರು.
ಸಚಿವ ಯು.ಟಿ.ಖಾದರ್, ಅನಿಲ್ ಲಾಡ್ ಸೇರಿದಂತೆ ಪಕ್ಷದ ಪ್ರಮುಖರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.