Publish Date: Thu, 18 Jan 2024 (15:41 IST)
Updated Date: Thu, 18 Jan 2024 (15:58 IST)
ಬೆಂಗಳೂರು-ಉದಯ್ ಗರುಡಾಚಾರ್‌ಗೆ ಲಘು ಹೃದಯಾಘಾತವಾಗಿದ್ದು,ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ಉದಯ್ ಗರುಡಾಚಾರ್ ದಾಖಲಾಗಿದ್ದಾರೆ.ಉದಯ್ ಗರುಡಾಚಾರ್. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು,ನಿನ್ನೆ ಸಂಜೆ ಎದೆನೋವಿನಿಂದ ಬಳಲುತ್ತಿದ್ದರು.ತಕ್ಷಣವೇ ಜಯನಗರದ ಅಪೋಲೋ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದರು.
ಲಘು ಹೃದಯಾಘಾತ ಆಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿ, ಚಿಕಿತ್ಸೆ ಆರಂಭಿಸಿದ್ದಾರೆ.ಐಸಿಯುನಲ್ಲಿ ಉದಯ್ ಗರುಡಾಚಾರ್‌ಗೆ ಚಿಕಿತ್ಸೆ ಮುಂದುವರೆದಿದೆ.ಸದ್ಯ ಉದಯ್ ಗರುಡಾಚಾರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇಂದು ವಾರ್ಡ್‌ಗೆ ಅವರನ್ನು ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಉದಯ್ ಗರುಡಾಚಾರ್ ಕುಟುಂಬದಿಂದ ಮಾಹಿತಿ ಲಭ್ಯವಾಗಿದೆ.