Select Your Language

Notifications

webdunia
webdunia
webdunia
webdunia

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಇಬ್ಬರು ಯುವ ಕೃಷಿಕರು ಸಾವು

Karnataka Rain Effect
ಬೀದರ್: ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ವರದಿಯಾಗಿದೆ. 

ಮೃತ ಯುವಕರನ್ನು ನಾವದಗಿ ಗ್ರಾಮದ ರೇವಣಸಿದ್ದ (28) ಮತ್ತು ಜೇವರ್ಗಿಯ ಯಲ್ಲಾಲಿಂಗ (28)ಎಂದು ಗುರುತಿಸಲಾಗಿದೆ. 

ಗುರುವಾರ ಸಂಜೆ (ಏ.23) ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಮಳೆ ಶುರುವಾಗಿದೆ. ಹೀಗಾಗಿ ಇಬ್ಬರು ರೈತರು ಜಮೀನಿನಲ್ಲಿದ್ದ ಮಾವಿನ ಮರದ ಕಳಗಡೆ ನಿಂತಿದ್ದರು. ಈ ವೇಳೆ ಮಾವಿನ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಖಟಕ್ ಚಿಂಚೋಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಖಟಕ್ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್ ಯುಎಸ್ ದಾಳಿಯಲ್ಲಿ ಗಾಯಗೊಂಡಿರುವ ಮೊಜ್ತಾಬಾ ಖಮೇನಿ ಆರೋಗ್ಯದ ಬಗ್ಗೆ ಹೊಸ ಅಪ್ಡೇಟ್‌