Select Your Language

Notifications

webdunia
webdunia
webdunia
webdunia

ಸಿಎಂ ಗ್ರಾಮ ವಾಸ್ತವ್ಯದ ಭದ್ರತಾ ವೈಫಲ್ಯದ ಹಿನ್ನೆಲೆ; ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ

ಸಿಎಂ ಗ್ರಾಮ ವಾಸ್ತವ್ಯದ ಭದ್ರತಾ ವೈಫಲ್ಯದ ಹಿನ್ನೆಲೆ; ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ
ರಾಯಚೂರು , ಶನಿವಾರ, 29 ಜೂನ್ 2019 (11:47 IST)
ರಾಯಚೂರು : ಸಿಎಂ ಕುಮಾರಸ್ವಾಮಿ ಕರೇಗುಡ್ಡ ಗ್ರಾಮ ವಾಸ್ತವ್ಯದ ವೇಳೆ ಸರಿಯಾದ ಭದ್ರತೆ ನೀಡಿಲ್ಲ ಎಂದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಆದೇಶಿಸಲಾಗಿದೆ.




ರಾಯಚೂರಿನ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ನಿಂಗಪ್ಪ ಹಾಗೂ ಯರಗೇರಾ ಇನ್ಸ್​ಪೆಕ್ಟರ್​ ದತ್ತಾತ್ರೇಯ ಅಮಾನತ್ತಿಗೆ ಒಳಗಾಗಿರುವ ಅಧಿಕಾರಿಗಳು. ಸಿಎಂ ರಾಯಚೂರಿನ ಕರೇಗುಡ್ಡ ಗ್ರಾಮದಲ್ಲಿ  ವಾಸ್ತವ್ಯ ಹೂಡಿದ ವೇಳೆ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮರು ನೇಮಕಕ್ಕೆ ಒತ್ತಾಯಿಸಿ ಸಿಎಂ ತೆರಳುತ್ತಿದ್ದ ವಾಹನಕ್ಕೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು.


ಈ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಪರಿಗಣಿಸಿ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ- ಸಿಎಂ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಚಲುವರಾಯಸ್ವಾಮಿ