Select Your Language

Notifications

webdunia
webdunia
webdunia
webdunia

ತುಂಗಭದ್ರಾ ಅಣೆಕಟ್ಟೆಗೆ ಗೇಟ್‌ ಇಳಿಸುವ ಕಾರ್ಯ ಆರಂಭ: ವಿಡಿಯೊಗ್ರಫಿ ಸಂಪೂರ್ಣ ನಿಷೇಧ

Tungabhadra Dam

Sampriya

ವಿಜಯನಗರ , ಗುರುವಾರ, 15 ಆಗಸ್ಟ್ 2024 (14:08 IST)
ವಿಜಯನಗರ: ಇಲ್ಲಿನ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್‌ನ ತೂಬಿಗೆ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಯತ್ನ ಆರಂಭಗೊಂಡಿದೆ.  ಇಂದು ಮಧ್ಯಾಹ್ನ ಗೇಟ್‌ ಇಳಿಸುವ ಪ್ರಾಯೋಗಿಕ ಪರೀಕ್ಷೆ ಶುರು ಮಾಡಲಾಗಿದೆ.

ಕ್ರಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ವಿಡಿಯೊಗ್ರಫಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮೊದಲ ಗೇಟ್ ಅನ್ನು ಗುರುವಾರ ಬೆಳಿಗ್ಗೆ ತುಂಗಭಧ್ರಾ ಅಣೆಕಟ್ಟೆಯ ಬಲದಂಡೆಗೆ ತರಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ 24 ಗಾಲಿಗಳನ್ನು ಒಳಗೊಂಡ ಬೃಹತ್ ಟ್ರಕ್‌ ಸುಮಾರು 13 ಟನ್‌ ತೂಕದ ಗೇಟ್ ಎಲಿಮೆಂಟ್ ಅನ್ನು ಅಣೆಕಟ್ಟೆಯ ಒಳಗೆ ಕೊಂಡೊಯ್ದಿತು. 19ನೇ ಗೇಟ್‌ ಸಮೀಪಕ್ಕೆ ತಲುಪಿದ ತಕ್ಷಣ ಧುಮ್ಕಿಕ್ಕಿ ಹರಿಯುತ್ತಿರುವ ನೀರಲ್ಲೇ ಗೇಟ್ ಇಳಿಸುವ ಪ್ರಯೋಗ ಆರಂಭವಾಯಿತು.

ತುಂಗಭದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ನದಿ ಎರಡು ಕವಲಾಗಿ ಹರಿಯುತ್ತದೆ. ಇಲ್ಲಿಯೇ ಹಳೆ ಸೇತುವೆ ಸಹ ಹಾದು ಹೋಗುತ್ತದೆ. ಅಲ್ಲಿಗೆ ಸಹ ಜನರು ತೆರಳುವುದಕ್ಕೆ ಸದ್ಯ ಅವಕಾಶ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾ ವೈದ್ಯೆ ಡೈರಿಯಲ್ಲಿ ಕೊನೆಯದಾಗಿ ಹೀಗೆ ಬರೆದಿದ್ದಳು