Publish Date: Tue, 01 Jan 2019 (19:45 IST)
Updated Date: Tue, 01 Jan 2019 (19:47 IST)
ಸಿದ್ಧಗಂಗಾ ಪರಮಪೂಜ್ಯ ಶ್ರೀಗಳು ಆರೋಗ್ಯವಾಗಿದ್ದಾರೆ. ಯಾರೂ ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದು, ವೈದ್ಯರಿಂದ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಶ್ರೀಗಳ ಎಲ್ಲಾ ಪ್ಯಾರಾಮೀಟರ್ಸ ಚೆನ್ನಾಗಿದೆ. ಇಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆ ಚೆನ್ನಾಗಿ ಮಾಡಲಾಗಿದೆ ಎಂದರು.
ಸ್ವಾಭಾವಿಕವಾಗಿ ಆಸ್ಪತ್ರೆಯಲ್ಲಿರುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಕೂಡಾ ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಎಂದರು.
ಶ್ರೀಗಳು ಇನ್ನು ಹಲವು ದಶಕಗಳ ಕಾಲ ನಮ್ಮ ನಡುವೆ ಇರಬೇಕು ಎಂದ ಅವರು, ಈ ನಾಡಿನ ಜನತೆಗೆ ಅವರ ಆಶೀರ್ವಾದ ಬಹಳ ಪ್ರಮುಖ ವಾಗಿ ಬೇಕಿದೆ ಎಂದೂ ಹೇಳಿದರು.