Select Your Language

Notifications

webdunia
webdunia
webdunia
webdunia

ಸಕಲೇಶಪುರದಲ್ಲಿ ನೋಡ ನೋಡುತ್ತಿದ್ದಂತೇ ಪಲ್ಟಿ ಹೊಡೆದ ಬೃಹತ್ ಟ್ರಕ್: ವಿಡಿಯೋ ವೈರಲ್

Truck flipped

Krishnaveni K

ಸಕಲೇಶಪುರ , ಗುರುವಾರ, 1 ಆಗಸ್ಟ್ 2024 (11:23 IST)
ಸಕಲೇಶಪುರ: ಭಾರೀ ಮಳೆಯಿಂದಾಗಿ ಈಗ ಸಕಲೇಶಪುರ ಘಾಟಿ ರಸ್ತೆಯಲ್ಲಿ ವಾಹನಗಳ ಓಟಾಡವೇ ಕಷ್ಟವಾಗಿದೆ. ಅದರಲ್ಲೂ ರಾತ್ರಿ ವೇಳೆ ಮಳೆ ಬಿದ್ದು ಜಾರುವ ರಸ್ತೆಯಲ್ಲಿ ಬೃಹತ್ ಲಾರಿಗಳು ನಿಯಂತ್ರಣ ಸಾಧಿಸಲು ಕಷ್ಟಪಡುತ್ತಿವೆ.

ಇದೀಗ ಬೃಹತ್ ಗಾತ್ರದ ಟ್ರಕ್ ಒಂದು ನೋಡ ನೋಡುತ್ತಿದ್ದಂತೇ ಪಲ್ಟಿ ಹೊಡೆಯುತ್ತಿರುವ ದೃಶ್ಯವೊಂದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಭಾರೀ ಗಾತ್ರದ ಟ್ರಕ್ ಮಾರ್ನಳ್ಳಿ ಬಳಿ ಪಲ್ಟಿ ಹೊಡೆದಿದೆ. ಮಳೆಯಿಂದಾಗಿ ಡ್ರೈವರ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿಯಾಗಿದೆ.

ತಡರಾತ್ರಿವರೆಗೂ ಸಕಲೇಶಪುರದಲ್ಲಿ ರಸ್ತೆ ಕ್ಲಿಯರ್ ಆಗಲು ಕಾದು ನಿಂತಿದ್ದ ಲಾರಿ ದಾರಿ ಕ್ಲಿಯರ್ ಆದ ಸೂಚನೆ ದೊರೆತ ಬಳಿಕ ಇನ್ನೇನು ಹೊರಡಲು ಸಿದ್ಧವಾಯಿತು. ಕೆಲವೇ ಹೆಜ್ಜೆ ಮುಂದೆ ಸಾಗಿದ ಬಳಿಕ ಜಾರುವ ರಸ್ತೆಯಲ್ಲಿ ನಿಯಂತ್ರಣ ಸಾಧಿಸಲಾಗದೇ ಲಾರಿ ಪಲ್ಟಿಯಾಗಿದೆ.

ತರಕಾರಿ ತುಂಬಿಕೊಂಡಿದ್ದ ಲಾರಿ ಹಾಸನದಿಂದ ಮಂಗಳೂರು ಕಡೆಗೆ ಸಂಚರಿಸುತ್ತಿತ್ತು ಎನ್ನಲಾಗಿದೆ. ತಡರಾತ್ರಿ ಘಟನೆ ನಡೆದಿದ್ದು, ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದು ರಾಜ್ಯದ ಸಮಸ್ಯೆ ಹೇಳಲು ಅಲ್ವಂತೆ