Daily Horoscope

Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಕಿರಿಕಿರಿಗೆ ರಾಜಧಾನಿಗರು ತತ್ತರ!

ಟ್ರಾಫಿಕ್
ಒಂದೆಡೆ ಮೆಟ್ರೋ ಕಾಮಗಾರಿ ಮತ್ತೊಂದೆಡೆ ಎಲಿವೆಟೆಡ್ ಪ್ಲೇಓವರ್ ರಿಪೇರಿಯಿಂದ ಸಂಚಾರದಟ್ಟಣೆ ಅಧಿಕವಾಗಿ ರಾಜಧಾನಿಗರು ಇಂದು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು.

ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಮೂರ್ನಾಲ್ಕು ಕಿಲೋಮೀಟರ್ ಉದ್ದ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಬೆಂಗಳೂರು- ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 7 ಟ್ರಾಫಿಕ್ ಜಾಮ್ ನಿಂದ ಕೂಡಿತ್ತು.
ಬೊಮ್ಮನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರದವರೆಗೂ ಸಂಚಾರ ದಟ್ಟಣೆ ಅಧಿಕವಾಗಿತ್ತು.

15 ಕಿಲೋಮೀಟರ್ ಕ್ರಮಿಸಲು 3 ಗಂಟೆ ತೆಗೆದುಕೊಂಡರು ವಾಹನ ಸವಾರರು. ಬಸ್ಸು, ಕಾರುಗಳಲ್ಲಿ ಕುಳಿತ ಪ್ರಯಾಣಿಕರು ಸುಸ್ತು ಹೊಡೆದರು. ಒಂದೆಡೆ ಮೆಟ್ರೋ ಕಾಮಗಾರಿ, ಮತ್ತೊಂದೆಡೆ ಎಲಿವೆಟೆಡ್ ಪ್ಲೇಓವರ್ ರಿಪೇರಿಯಿಂದ ಸಂಚಾರದಟ್ಟಣೆ ಅಧಿಕವಾಗಿ ಜನರ ನೆಮ್ಮದಿ ಹಾಳು ಮಾಡಿತು.




Share this Story:

Follow Webdunia kannada

ಮುಂದಿನ ಸುದ್ದಿ

ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಶುರು