Publish Date: Mon, 14 Jun 2021 (09:08 IST)
Updated Date: Mon, 14 Jun 2021 (09:09 IST)
ಬೆಂಗಳೂರು: ಇಷ್ಟು ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯೊಳಗೇ ಕೂತಿದ್ದವರೆಲ್ಲಾ ಈಗ ಅನ್ ಲಾಕ್ ಆದ ಬೆನ್ನಲ್ಲೇ ಮನೆಯಿಂದ ಹೊರಬರಲಾರಂಭಿಸಿದ್ದಾರೆ. ಪರಿಣಾಮ ನಿನ್ನೆಯಿಂದಲೇ ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ಅನ್ ಲಾಕ್ ಹಿನ್ನಲೆಯಲ್ಲಿ ಊರಿಗೆ ತೆರಳಿದ್ದ ಹಲವರು ಉದ್ಯೋಗಕ್ಕೆ ನಗರಕ್ಕೆ ಬಂದಿಳಿದಿದ್ದಾರೆ. ಇನ್ನು, ಹಲವರಿಗೆ ಇಂದಿನಿಂದ ಕಚೇರಿ ಕೆಲಸ ಶುರುವಾಗಿದೆ. ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗಿದೆ.
ಪರಿಣಾಮ ನಿನ್ನೆ ಸಂಜೆಯಿಂದಲೇ ನಗರದಲ್ಲಿ ಟ್ರಾಫಿಕ್ ಜ್ಯಾಮ್ ಕಂಡುಬಂದಿದೆ. ಸದ್ಯಕ್ಕೆ ಸಂಚಾರಿ ಬಸ್ ಗಳಿಗೆ ಅನುಮತಿ ನೀಡಲಾಗಿಲ್ಲ. ಬಸ್ ಸಂಚಾರಕ್ಕೆ ಅವಕಾಶ ಕೊಟ್ಟರೆ ಜನ ದಟ್ಟಣೆ ಇನ್ನಷ್ಟು ಹೆಚ್ಚುವುದು ಖಂಡಿತಾ.