Select Your Language

Notifications

webdunia
webdunia
webdunia
webdunia

ಬ್ಲ್ಯಾಕ್ ಫಂಗಸ್ ಔಷಧ ಮೇಲಿನ ಜಿಎಸ್ ಟಿ ಸಂಪೂರ್ಣ ಕಡಿತ

ಬ್ಲ್ಯಾಕ್ ಫಂಗಸ್ ಔಷಧ ಮೇಲಿನ ಜಿಎಸ್ ಟಿ ಸಂಪೂರ್ಣ ಕಡಿತ
ನವದೆಹಲಿ , ಭಾನುವಾರ, 13 ಜೂನ್ 2021 (09:16 IST)
ನವದೆಹಲಿ: ಬ್ಲ್ಯಾಕ್ ಫಂಗಸ್ ಗೆ ನೀಡಲಾಗುವ ಔಷಧಗಳಿಗೆ ಇನ್ನು ಮುಂದೆ ಜಿಎಸ್ ಟಿ ವಿಧಿಸಲಾಗುವುದಿಲ್ಲ. ಜೊತೆಗೆ ಕೊರೋನಾ ವ್ಯಾಕ್ಸಿನ್ ಮೇಲಿನ ಜಿಎಸ್ ಟಿ ಕಡಿತದ ಅವಧಿಯನ್ನೂ ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ.

 

ಈ ಬಗ್ಗೆ ಮಾಹಿತಿ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಾಕ್ಸಿನ್ ಮೇಲಿನ 5 ಶೇಕಡಾ ಜಿಎಸ್ ಟಿ ಮುಂದುವರಿಸಲಾಗಿದೆ. ಕೇಂದ್ರ ಈಗಾಗಲೇ ಘೋಷಿಸಿರುವಂತೆ ಶೇ. 75 ರಷ್ಟು ವ್ಯಾಕ್ಸಿನ್ ಖರೀದಿ ಮಾಡಲಿದ್ದು, ಅದರ ಜಿಎಸ್ ಟಿಯನ್ನೂ ಪಾವತಿಸಲಿದೆ. ಈ ಪೈಕಿ ಶೇ.70 ರಷ್ಟು ಜಿಎಸ್ ಟಿ ಹಣವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲಿದೆ.

ಬ್ಲ್ಯಾಕ್ ಫಂಗಸ್ ಗೆ ನೀಡಲಾಗುವ ಔಷಧಗಳ ಮೇಲಿನ ಜಿಎಸ್ ಟಿ ಸುಂಕಕ್ಕೆ ಸಂಪೂರ್ಣ ವಿನಾಯ್ತಿ ನೀಡಲಾಗಿದೆ. ಈ ಹೊಸ ನಿಯಮ ಸೆಪ್ಟೆಂಬರ್ ವರೆಗೂ ಜಾರಿಯಲ್ಲಿರಲಿದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮೈಸೂರಿಗೆ ರೋಹಿಣಿ ಸಿಂದೂರಿ:ಆನ್ ಲೈನ್ ನಲ್ಲಿ ಅಭಿಯಾನ ಶುರು