Publish Date: Sat, 12 Jun 2021 (09:14 IST)
Updated Date: Sat, 12 Jun 2021 (09:15 IST)
ಬೆಂಗಳೂರು: ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ತಮ್ಮ ಗಂಟುಮೂಟೆ ಕಟ್ಟಿಕೊಂಡು ತವರಿಗೆ ಹೋಗಿದ್ದವರೆಲ್ಲಾ ಈಗ ಅನ್ ಲಾಕ್ ಸುದ್ದಿ ಕೇಳಿ ಬೆಂಗಳೂರಿನತ್ತ ಮರಳುತ್ತಿದ್ದಾರೆ.
ಸೋಮವಾರದಿಂದ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದ್ದು, ಊರು ಸೇರಿದ್ದ ಕಾರ್ಮಿಕರು, ಉದ್ಯೋಗದಾತರು ಈಗ ನಗರಕ್ಕೆ ಮರಳುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೂ ಇದೇ ಆತಂಕವಿತ್ತು. ಇದೇ ಕಾರಣಕ್ಕೆ ಶೇ.5 ರಷ್ಟು ಪಾಸಿಟಿವಿಟಿ ದರ ಬರುವವರೆಗೂ ಅನ್ ಲಾಕ್ ಮಾಡಲ್ಲ ಎಂದಿತ್ತು. ಈ ರೀತಿ ವಲಸೆ ಬಂದ ಜನರಿಂದಲೇ ಮತ್ತೆ ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಎಂಬ ಆತಂಕವಿದೆ. ಹೀಗಾಗಿ ಸದ್ಯಕ್ಕೆ ಹೊಸ ನಿಯಮವನ್ನು ಒಂದು ವಾರದ ಮಟ್ಟಿಗೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.