Select Your Language

Notifications

webdunia
webdunia
webdunia
webdunia

ಸಂಚಾರಿ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡಿ ಹಣ ವಸೂಲಿ

ಸಂಚಾರಿ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡಿ ಹಣ ವಸೂಲಿ
bangalore , ಮಂಗಳವಾರ, 28 ಸೆಪ್ಟಂಬರ್ 2021 (19:46 IST)
ಮಾಡುತ್ತಿದ್ದಾರೆ ಎಂಬುದಕ್ಕೆ ಇಂಬು ನೀಡುವಂತೆ ಜಯನಗರ ಠಾಣೆ ಸಂಚಾರ ಪೆÇಲೀಸರು ಟೋಯಿಂಗ್ ಮಾಡಿದ್ದ ವಾಹನ ಬಿಡಲು ಲಂಚಕ್ಕೆ ಬೇಡಿಕೆಯಿಟ್ಟು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಮತ್ತಷ್ಟು ಮುಜುಗರಕ್ಕೀಡಾಗಿದ್ದಾರೆ.  
ಮಲ್ಲೇಶ್ವರ ನಿವಾಸಿಯೊಬ್ಬರು ಜೆ.ಪಿ. ನಗರದ ಶಾಂತಿ ಸಾಗರ ಹೋಟೆಲ್? ಮುಂಭಾಗ ಬೈಕ್ ನಿಲ್ಲಿಸಿದ್ದರು. ಈ ವೇಳೆ ಆಗಮಿಸಿದ್ದ ಟೋಯಿಂಗ್? ಸಿಬ್ಬಂದಿ ಆ ಬೈಕ್ ಅನ್ನು ? ಟೋಯಿಂಗ್ ಮಾಡಿಕೊಂಡು ಹೋಗಿದ್ದರು. ಬಳಿಕ ಆ ವಾಹನದ ವಾರಸುದಾರ ಠಾಣೆಗೆ ಹೋಗಿ ವಿಚಾರಿಸಿದಾಗ ಟೋಯಿಂಗ್ ಸರಕಾರಿ ಶುಲ್ಕ 1,150 ರೂ. ಇರುವುದು ತಿಳಿದು ಬಂದಿತ್ತು. ಆದರೆ 800 ರೂ. ಕೊಟ್ಟರೆ ಬಿಟ್ಟುಬಿಡುವುದಾಗಿ ಪೆÇಲೀಸರು ಪರವಾಗಿ ಕೆಲಸ ಮಾಡುತ್ತಿದ್ದ ಟೋಯಿಂಗ್ ಸಿಬ್ಬಂದಿ ಆಮಿಷವೊಡ್ಡಿದ್ದರು.
ಮಲ್ಲೇಶ್ವರದ ಆ ನಿವಾಸಿ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅದರಂತೆ ಎಸಿಬಿ ಅಧಿಕಾರಿಗಳು ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಮಾತ್ರವಲ್ಲ ಲಂಚ ಪಡೆಯುತ್ತಿದ್ದ ಟೋಯಿಂಗ್ ಸಿಬ್ಬಂದಿ ಸಿದ್ದೇಗೌಡ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಯ ಇನ್‍ಸ್ಪೆಕ್ಟರ್?, ಸಬ್? ಇನ್?ಸ್ಪೆಕ್ಟರ್ ಹಾಗೂ ಇತರ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಜಾ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಗಳ ಬಂಧನ