Publish Date: Tue, 28 Sep 2021 (19:36 IST)
Updated Date: Tue, 28 Sep 2021 (19:41 IST)
ನಡೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರೊಬ್ಬರನ್ನು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಮೂಡಲಪಾಳ್ಯ ನಿವಾಸಿ ಅರವಿಂದ್(35) ಮತ್ತು ಸೋಮಶೇಖರ್ (38) ಸೇರಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.50 ಲಕ್ಷ ರೂ. ನಗದು, 4.80 ರೂ. ಮೌಲ್ದದ 120 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಇತ್ತೀಚೆಗೆ ಚಿಕ್ಕಮಗಳೂರಿನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಟಿ.ಬಿ.ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೂವರು ಆರೋಪಿಗಳು ಅಡ್ಡಗಟ್ಟಿ 1.74 ಲಕ್ಷ ರೂ.ನಗದು ದರೋಡೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.