Select Your Language

Notifications

webdunia
webdunia
webdunia
Tuesday, 8 April 2025
webdunia

ಮಹಾನಗರದಲ್ಲಿ ಸಂಚಲನ ಸೃಷ್ಟಿಸಿದ ಅತ್ಯಾಚಾರಿ ಆರೋಪಿ ಕ್ಯಾಬ್ ಚಾಲಕನನ್ನ ಬಂಧಿಸಿದ ಪೊಲೀಸರು

The police arrested the cab driver of the rapist accused of causing a commotion in the city
bangalore , ಗುರುವಾರ, 23 ಸೆಪ್ಟಂಬರ್ 2021 (22:01 IST)
ಬೆಂಗಳೂರು: ಮಹಾನಗರದಲ್ಲಿ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರಿ ಆರೋಪಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಿ ಮಾತ್ರ ನಾನೇನು ಮಾಡಿಲ್ಲ ಎಂದ್ದಿದ್ದಾನೆ.  ಆದರೀಗ ಯುವತಿ ಮೆಡಿಕಲ್ ರಿಪೋರ್ಟ್ ಮೇಲೆ ಕೇಸ್ ನಿಂತಿದ್ದು ಕುತೂಹಲ ಕೆರಳಿಸಿದೆ.
ಸ್ನೇಹಿತೆ ಮನೆಗೆ ಹೋಗಿ ತಡರಾತ್ರಿ ಮನೆಗೆ ಹೊರಟಿದ್ದ ಯುವತಿಯನ್ನು ಕ್ಯಾಬ್ ಚಾಲಕನೊಬ್ಬ ಪಿಶಾಚಿಯಂತೆ ಕಾಡಿದ್ದಾನೆ. ಒಂಟಿ ಹೆಣ್ಣನ್ನು ಸೇಫಾಗಿ ಮನೆಗೆ ತಲುಪಿಸಬೇಕಿದ್ದ ಚಾಲಕ ಕಿರಾತಕನಾಗಿ ವರ್ತಿಸಿದ್ದಾನೆ ಎಂದು ಕ್ಯಾಬ್ ಡ್ರೈವರ್ ವಿರುದ್ಧ ಯುವತಿ ಕೊಟ್ಟ ದೂರು ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದೆ.
ಮಂಗಳವಾರ ತಡರಾತ್ರಿ ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ್ ಪಾಳ್ಯಕ್ಕೆ ತೆರಳಲು ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ದಳು. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವರಾಜಲು ಹೆಸರಿನ ಕ್ಯಾಬ್ ಡ್ರೈವರ್ ಪಿಕಪ್ ಪಾಯಿಂಟ್‌ಗೆ ಬಂದು ಯುವತಿಯನ್ನ ಕರೆದೊಯ್ದಿದ್ದಾನೆ.
ಡ್ರಾಪ್ ಪಾಯಿಂಟ್‌ ಬಳಿ ಅತ್ಯಾಚಾರವೆಸೆಗಿದ ಡ್ರೈವರ್: ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ. ಆಗ ನಿದ್ದೆ ಮಂಪರಿನಲ್ಲಿದ ಯುವತಿಯನ್ನ ಎದ್ದೇಳಿಸಲು ಕ್ಯಾಬ್ ಡ್ರೈವರ್ ಹಿಂದಿನ ಡೋರ್ ತೆಗೆದಿದ್ದಾನೆ. ಈ ವೇಳೆ ಯುವತಿ ಮೇಲೆರಗಿ ಅತ್ಯಾಚಾರವೆಸೆಗಿ ಅಟ್ಟಹಾಸ ಮೆರೆದಿದ್ದಾನೆ ಎನ್ನಲಾಗಿದೆ. ಆಗ ಎಚ್ಚೆತ್ತ ಯುವತಿ ಕಿರುಚಾಡಿದ್ದಾಳೆ. ನಂತರ ಗಾಬರಿಯಿಂದ ಕಾರಿನಿಂದ ಇಳಿದು ತನ್ನ ಮನೆಯತ್ತ ದೌಡಾಯಿಸಿದ್ದಾಳೆ ಎನ್ನಲಾಗಿದೆ.
ಕಾಮುಕ ಡ್ರೈವರ್‌ನಿಂದ ತಪ್ಪಿಸಿಕೊಂಡು ಮನೆಗೆ ಬಂದ ಯುವತಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡಿದ್ದಾಳೆ. ಬಳಿಕ 112ಕ್ಕೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾಳೆ. ಕೂಡಲೇ ಯುವತಿ ಮನೆಗೆ ಬಂದ ಪೊಲೀಸರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಯಿಸಿ ಯುವತಿಯನ್ನ ಜೀವನ್ ಭೀಮಾನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯುವತಿಯಿಂದ ದೂರು ಬರೆಸಿಕೊಂಡು ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮನೆಗೆ ಕಳುಹಿಸಿದ್ದಾರೆ.
ಕ್ಯಾಬ್​ ಡ್ರೈವರ್​ ವಿರುದ್ಧ ದೂರು: ಯುವತಿಯಿಂದ ದೂರು ಪಡೆದ ಪೊಲೀಸರು ಆರೋಪಿ ಕ್ಯಾಬ್ ಡ್ರೈವರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಂತರ 3 ತಂಡಗಳನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಆದರೆ, ಆರೋಪಿಯ ಮೊಬೈಲ್ ಯುವತಿ ಬಳಿಯೇ ಇತ್ತು. ಯಾಕಂದರೆ, ಘಟನೆ ನಡೆದ ಬಳಿಕ ಗಾಬರಿಗೊಂಡಿದ್ದ ಯುವತಿ, ಸೀಟ್‌ ಮೇಲಿದ್ದ ತನ್ನ ವಸ್ತುಗಳ ಜೊತೆಗೆ ಕ್ಯಾಬ್ ಡ್ರೈವರ್ ಮೊಬೈಲ್ ಅನ್ನು ಸಹ ತನ್ನ ಬ್ಯಾಗ್‌ನಲ್ಲಿ ಹಾಕಿಕೊಂಡು ಬಂದಿದ್ದಳು.

Share this Story:

Follow Webdunia kannada

ಮುಂದಿನ ಸುದ್ದಿ

ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ