Select Your Language

Notifications

webdunia
webdunia
webdunia
webdunia

ಗುರುರಾಘವೇಂದ್ರ ಬ್ಯಾಂಕ್ ನಿಂದ ಬೇಕಾ ಬಿಟ್ಟಿ ಸಾಲ ಮರುಪಾವತಿ ನೋಟಿಸ್,ಗ್ರಾಹಕರ ಜೀವನದ ಜೊತೆ ಚಲ್ಲಾಟ

ಗುರುರಾಘವೇಂದ್ರ ಬ್ಯಾಂಕ್ ನಿಂದ ಬೇಕಾ ಬಿಟ್ಟಿ ಸಾಲ ಮರುಪಾವತಿ ನೋಟಿಸ್,ಗ್ರಾಹಕರ ಜೀವನದ ಜೊತೆ ಚಲ್ಲಾಟ
bangalore , ಗುರುವಾರ, 23 ಸೆಪ್ಟಂಬರ್ 2021 (21:23 IST)
ಬೆಂಗಳೂರು: ತಮ್ಮ ಜೀವಮಾನವಿಡೀ ಬ್ಯಾಂಕ್‌ನಲ್ಲಿಟ್ಟು ಇದೀಗ ತಮ್ಮ ಹಣವನ್ನು ವಾಪಸ್‌ ಪಡೆಯಲಾಗದೆ ತಮಗೆ ನ್ಯಾಯ ಕೊಡಿಸಿ ಎಂದು ಸಾವಿರಾರು ಠೇವಣಿದಾರರು ಪ್ರತಿದಿನ ಹೋರಾಟ ಮಾಡುತ್ತಿದ್ದಾರೆ. ಈ ನಡುವೆ ಬ್ಯಾಂಕ್‌ ಮಾಡಿರುವ ಮತ್ತೊಂದು ಮೋಸ ಬಯಲಾಗಿದೆ. ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ನಿಂದ ಇತ್ತೀಚೆಗೆ ಹಲವರಿಗೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ವಿಚಿತ್ರ ಎಂದರೆ ಹೀಗೆ ನೋಟಿಸ್‌ ಪಡೆದವರಲ್ಲಿ ಹಲವರಿಗೆ ಬ್ಯಾಂಕ್‌ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಈ ಬ್ಯಾಂಕ್‌ನಲ್ಲಿ ಠೇವಣಿಯೂ ಇಲ್ಲ, ಬ್ಯಾಂಕ್‌ನಲ್ಲಿ ಯಾವುದೇ ವ್ಯವಹಾರವೂ  ಮಾಡಿರುವುದಿಲ್ಲ ಹೀಗೆ ಮಾಡಿ ಆಡಳಿತ ಮಂಡಳಿ ಈಗಾಗಲೇ ನೊಂದಿರುವ ಗ್ರಾಹಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್‌ ಆರೋಪಿಸಿದ್ದಾರೆ.  
 
ಗುರುವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್‌ ಬ್ಯಾಂಕ್‌ನ ಆಡಳಿತ ಮಂಡಳಿ ಯಾರದೋ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಅವರ ಹೆಸರಲ್ಲಿ ತಾವು ಸಾಲ ಪಡೆದು ವಂಚನೆ ಮಾಡಿರುವುದು ಇದರಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ತಾವು ಬ್ಯಾಂಕ್‌ನಿಂದ ಸಾಲ ಪಡೆಯದಿದ್ದರೂ ಕೋಟ್ಯಂತರ ರೂಪಾಯಿ ಸಾಲ ವಾಪಸ್‌ ಮಾಡುವಂತೆ ಬ್ಯಾಂಕ್‌ ನೋಟಿಸ್‌ ಕಳುಹಿಸಿರುವುದರಿಂದ ನೋಟಿಸ್‌ ಪಡೆದವರು ಆತಂಕಕ್ಕೆ ಒಳಗಾಗಿದ್ದು, ನನ್ನನ್ನು ಸಂಪರ್ಕಿಸಿ ಮುಂದೆ ಏನು ಮಾಡಬೇಕೆಂದು ಕೇಳಿರುತ್ತಾರೆ. ಅವರಿಗೆ ವಕೀಲರ ನೆರವನ್ನು ಕೊಡಿಸಿ, ಅವರ ಮೂಲಕ ಬ್ಯಾಂಕ್‌ನಿಂದ ನೋಟಿಸ್‌ ಪಡೆದವರ ಠೇವಣಿಯ ಬಗ್ಗೆ ಹಾಗೂ ಸಾಲದ ಬಗ್ಗೆ ವಿವರವಾಗಿ ಮಾಹಿತಿ ನೀಡುವಂತೆ ಬ್ಯಾಂಕ್‌ಗೆ ನೋಟಿಸ್‌ ಕಳುಹಿಸಲಾಗಿದೆ. ನೋಟಿಸ್‌ ತಲುಪಿ 10 ದಿನಗಳಾದರೂ ಬ್ಯಾಂಕ್‌ನಿಂದ ಯಾವುದೇ ಉತ್ತರ ಬಂದಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
 
ಪ್ರಸ್ತುತ ನೀಡುತ್ತಿರುವ ದಾಖಲೆಯಲ್ಲಿ ಚಂಪಕಾವತಿ ಎನ್ನುವವರು 35 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ 2011 ರಲ್ಲಿ ತೆಗೆದುಕೊಂಡಿದ್ದು ಅದರ ಯಾವುದೇ ಕಂತನ್ನು ಕಟ್ಟದೆ ಅದರ ಬಡ್ಡಿ & ಅಸಲು ಸೇರಿ ಇದೀಗ 2 ಕೋಟಿ 12 ಲಕ್ಷ ರೂಪಾಯಿಗಳನ್ನು ತಕ್ಷಣವೇ ಕಟ್ಟುವಂತೆ ನೋಟಿಸ್‌ ಜಾರಿ ಮಾಡಿರುತ್ತಾರೆ. ಇವರಿಗೆ ಲೋನ್‌ ಕೊಡುವಾಗ ಶೂರಿಟಿಯಾಗಿ ಯಾವ ಪತ್ರಗಳನ್ನ ಇವರಿಂದ ತೆಗೆದುಕೊಂಡಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. 35 ಲಕ್ಷ ರೂಪಾಯಿಗಳನ್ನ ಯಾವ ಕಾರಣಕ್ಕೆ ಸಾಲ ಕೊಟ್ಟಿದ್ದರು, ಲೋನ್‌ ಕೊಡುವಾಗ ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೆ ಹೇಗೆ ಕೊಟ್ಟರು ಎಂಬುದಕ್ಕೂ ಮಾಹಿತಿಯಿಲ್ಲ. ಈ ರೀತಿ ಕೆಲವು ಘಟನೆಗಳು ನಮಗೆ ಕಂಡುಬಂದಿವೆ. ಈ ತರಹ ಎಷ್ಟು ಬೇನಾಮಿಗಳನ್ನು ಸೃಷ್ಟಿಸಲಾಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಆಡಿಟ್‌ ರಿಪೋರ್ಟ್‌ ವೇಳೆಯೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿರುವುದು ಆಶ್ಚರ್ಯಕರ ಎಂದು ತಿಳಿಸಿದ್ದಾರೆ. 
 
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ಆಡಳಿತ ಮಂಡಳಿ ಮಾಡಿರುವ ಹಗರಣವನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೆ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲು ಸಿಬಿಐ ಗೆ ಮಾತ್ರ ಸಾಧ್ಯ. ಹಾಗಾಗಿ ಈ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ರಾಜ್ಯ & ಕೇಂದ್ರ ಸರ್ಕಾರಗಳಿಗೆ ಮತ್ತೊಮ್ಮೆ ಆಗ್ರಹಪಡಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ  ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ ಶಂಕರ ಗುಹಾ ದ್ವಾರಕಾನಾಥ್‌ ಹೇಳಿದ್ದಾರೆ.
bank

Share this Story:

Follow Webdunia kannada

ಮುಂದಿನ ಸುದ್ದಿ

ಪಾಲಿಕೆ ಗದ್ದುಗೆ ಏರೋದಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯ-ಕಲಬುರಗಿ