Select Your Language

Notifications

webdunia
webdunia
webdunia
webdunia

ನಾಳೆ ಯುವ ಕೋವಿಡ್ ಲಸಿಕಾ ಮೇಳ

ನಾಳೆ ಯುವ ಕೋವಿಡ್ ಲಸಿಕಾ ಮೇಳ
ಚಿಕ್ಕಬಳ್ಳಾಪುರ , ಮಂಗಳವಾರ, 4 ಜನವರಿ 2022 (16:53 IST)
ಚಿಕ್ಕಬಳ್ಳಾಪುರ : 15 ರಿಂದ 18 ವರ್ಷದ ಒಳಗಿನ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲು ಅವರು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ನಾಳೆ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ನಿನ್ನೆ ಮತ್ತು ಇಂದು ಕೋವಿಡ್ ಲಸಿಕೆ ಪಡೆಯದೇ ಬಾಕಿ ಉಳಿದಿರುವ ವಿವಿಧ ಶಾಲಾ ಕಾಲೇಜುಗಳ 15 ವರ್ಷಕ್ಕೂ ಮೇಲ್ಪಟ್ಟ ಮಕ್ಕಳೆಲ್ಲರನ್ನು ಜನವರಿ 5 ರಂದೇ ಕೋವಿಡ್ ಲಸಿಕಾಕರಣದ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಯುವ ಕೋವಿಡ್ ಲಸಿಕಾ ಮೇಳ ಆಯೋಜನೆಯ ಪೂರ್ವ ಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಯುವ ಜನತೆಯನ್ನು ಲಸಿಕಾಕರಣದ ವ್ಯಾಪ್ತಿಗೆ ಒಳಪಡಿಸಿ ಕೋವಿಡ್ನಿಂದ ಸಂಪೂರ್ಣ ರಕ್ಷಣೆಗೆ ತರಲು ಜಿಲ್ಲೆಯಲ್ಲಿ ಲಸಿಕಾ ಮೇಳವನ್ನು ಹಮ್ಮಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಅದರಂತೆ ಜಿಲ್ಲೆಯಾದ್ಯಂತ ವಿವಿಧ ಶಾಲಾ ಕಾಲೇಜುಗಳಲ್ಲಿ 70ಕ್ಕೂ ಹೆಚ್ಚು ಸತ್ರಗಳೊಂದಿಗೆ ಜನವರಿ 5ರಂದು ಕೋವಿಡ್ ಯುವ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಲಾಕ್ ಡೌನ್ ತಜ್ಞರ ಸಲಹೆ