Publish Date: Tue, 03 May 2022 (19:23 IST)
Updated Date: Tue, 03 May 2022 (19:52 IST)
ಜಮೀನು ವಿವಾದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಳೆದ ಟೊಮೆಟೊ ಬೆಳೆ ಹಾಳು ಮಾಡಿದ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ವಾಮಿ ಎಂಬುವರಿಗೆ ಸೇರಿದ 25 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಟೊಮೊಟೊ ಬೆಳೆ ನಾಶ ಮಾಡಲಾಗಿದೆ. ಅಪಾರ ಮೌಲ್ಯದ ಟೊಮೊಟೊ ಬೆಳೆ ಮತ್ತು ಹನಿ ನೀರಾವರಿ ಪೈಪ್ಗಳನ್ನು ದುಷ್ಕರ್ಮಿಗಳು ನಾಶಮಾಡಿದ್ದು, ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.