Publish Date: Tue, 03 May 2022 (18:56 IST)
Updated Date: Tue, 03 May 2022 (19:03 IST)
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಜನ ಮತ್ತೆ ಬಸವರಾಜ ಬೊಮ್ಮಾಯಿ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಹೇಳಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಕಾಮನ್ಮ್ಯಾನ್ ಸಿಎಂ. ನಾಯಕತ್ವ ಬದಲಾವಣೆ ಕಪೋಲಕಲ್ಪಿತ. ಅವರ ನೇತೃತ್ವದಲ್ಲೇ ಹೋಗಬೇಕು ಅನ್ನೋದು ಜನತೆಯ ಬಯಕೆ. 2023ರ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯುತ್ತೆ ಎಂದು ನಾಯಕತ್ವ ಗೊಂದಲಕ್ಕೆ ತೆರೆಎಳೆದರು.