Publish Date: Thu, 11 Jul 2019 (08:23 IST)
Updated Date: Thu, 11 Jul 2019 (08:26 IST)
ಬೆಂಗಳೂರು: ಶಾಸಕರ ರಾಜೀನಾಮೆ ಪ್ರಹಸನಗಳಿಂದಾಗಿ ರಾಜಕೀಯ ಹೈ ಡ್ರಾಮಾಕ್ಕೆ ಸಾಕ್ಷಿಯಾಗಿರುವ ಕರ್ನಾಟಕ ರಾಜಕಾರಣಕ್ಕೆ ಇಂದು ಕ್ಲೈಮ್ಯಾಕ್ಸ್ ಬೀಳುವ ನಿರೀಕ್ಷೆಯಿದೆ.
ಇಂದು ಬೆಳಿಗ್ಗೆ 11 ಗಂಟೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸರ್ಕಾರದ ಭವಿಷ್ಯದ ಕುರಿತು ಚರ್ಚೆಯಾಗಲಿದೆ.
ಇನ್ನೊಂದೆಡೆ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದ ಸ್ಪೀಕರ್ ರಮೇಶ್ ಕುಮಾರ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ 10 ಶಾಸಕರ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಅದರ ತೀರ್ಮಾನ ಹೊರಬೀಳಲಿದೆ. ಈ ಎರಡು ಕಾರಣಕ್ಕೆ ಇಂದಿನ ದಿನ ಮಹತ್ವದ್ದಾಗಿದ್ದು, ಸರ್ಕಾರ ಸರ್ಕಸ್ ಗೆ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.