Select Your Language

Notifications

webdunia
webdunia
webdunia
webdunia

ರಾಜೀನಾಮೆ ನೀಡಿರೋ ಶಾಸಕರನ್ನ ಅನರ್ಹ ಮಾಡಿ ಎಂದ ಕಾಂಗ್ರೆಸ್

ಕಾಂಗ್ರೆಸ್
ರಾಜೀನಾಮೆ ನೀಡೋ ಮೂಲಕ ಮೈತ್ರಿ ಸರಕಾರ ಅಸ್ತಿರಗೊಳಿಸಲು ಯತ್ನಿಸಿರುವ ಕಾಂಗ್ರೆಸ್ ಶಾಸಕರು ಕೂಡಲೇ ರಾಜೀನಾಮೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕಾಗುತ್ತದೆ ಎಂದು ಕೈ ಪಡೆ ಖಡಕ್ ವಾರ್ನಿಂಗ್ ನೀಡಿದೆ.

ಕಾಂಗ್ರೆಸ್ ನ ಶಾಸಕರು ರಾಜೀನಾಮೆ ನೀಡಿದ್ದಾರೆ. ಆ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸಭಾಧ್ಯಕ್ಷರಿಗೆ ದೂರು ಕೊಡಲು ಕಾಂಗ್ರೆಸ್ ಸಜ್ಜಾಗಿದೆ.

ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ನ ಶಾಸಕಾಂಗ ಸಭೆಗೆ ಸುಧಾಕರ, ಅಂಜಲಿ ನಿಂಬಾಳ್ಕರ್, ತುಕಾರಾಂ, ರಾಜೇಗೌಡ, ಎಂಟಿಬಿ ನಾಗರಾಜು, ಫಾತೀಮಾ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಪಕ್ಷದ ಅನುಮತಿ ಪಡೆದು ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗಾಗಿ ಟವರ್ ಏರಿದ ಪಾಗಲ್ ಗಂಡ