Publish Date: Wed, 10 Jul 2019 (18:59 IST)
Updated Date: Wed, 10 Jul 2019 (19:01 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರು ಇದೀಗ ಸ್ಪೀಕರ್ ವಿರುದ್ಧ ಫುಲ್ ಗರಂ ಆಗಿದ್ದು, ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದಾರೆ.
ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಆದರೆ ಅವನ್ನು ಅಂಗೀಕಾರ ಮಾಡೋ ವಿಷಯದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದಾರೆ. ಹೀಗಂತ ದೂರಿರುವ ಮುಂಬೈ ಸೇರಿರೋ ಶಾಸಕರು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದಾರೆ.
ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದಾರೆ. ನಾಳೆ ಅರ್ಜಿ ವಿಚಾರಣೆ ಬರಲಿದ್ದು, ಸುಪ್ರೀಂಕೋರ್ಟ್ ನೀಡಲಿರೋ ತೀರ್ಪಿನತ್ತ ಗಮನ ಕೇಂದ್ರಿಕೃತವಾಗಿದೆ.