Publish Date: Mon, 24 Jul 2023 (14:00 IST)
Updated Date: Mon, 24 Jul 2023 (19:45 IST)
ಖಾಸಗಿ ಚಾಲಕ ಹಾಗೂ ಮಾಲೀಕ ಸಂಘಟನೆಗಳು 27ರಂದು ಬಂದ್‌ಗೆ ಕರೆ ಕೊಟ್ಟ ಹಿನ್ನೆಲೆ ಖಾಸಗಿ ಸಾರಿಗೆ ಸಂಘಟನೆಗಳನ್ನ ಮಾತುಕತೆಗೆ ಸಾರಿಗೆ ಸಚಿವರು ಆಹ್ವಾನಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು, ಶಾಂತಿನಗರದ ಸಾರಿಗೆ ಕೇಂದ್ರ ಕಚೇರಿಯಲ್ಲಿ ಸಚಿವರ ಸಮ್ಮುಖದಲ್ಲಿ ಇಂದು ಖಾಸಗಿ ಸಾರಿಗೆ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದಾರೆ. 35 ಖಾಸಗಿ ಸಾರಿಗೆ ಸಂಘನೆಗಳು ಸಭೆಯಲ್ಲಿ ಭಾಗಿಯಾಗಿದ್ದವು. ಸಭೆಯಲ್ಲಿ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಮಾತ್ರ ಅವಕಾಶವಿತ್ತು.